ಕಾಲೇಜಿಗೆ ಹೋದ ಚಂದನದ ಗೊಂಬೆಯಂಥಾ ಮಗಳು ಶವವಾಗಿ ಪತ್ತೆ! ಕೈ-ಹಿಡಿದು ಕಾಲುವೆಗೆ ಹಾರಿದವ ಬದುಕಿಬಂದ!

ಕಾಲೇಜಿಗೆ ಹೋದ 19 ವರ್ಷದ ಯುವತಿಯ ಶವ ಮೂರು ದಿನಗಳ ನಂತರ ಕಾಲುವೆಯಲ್ಲಿ ಪತ್ತೆಯಾಗುತ್ತದೆ. ತನಿಖೆ ನಡೆಸಿದಾಗ, ಪೋಷಕರ ವಿರೋಧದ ನಡುವೆಯೂ ಪ್ರೀತಿಸುತ್ತಿದ್ದ ಯುವಕನೊಂದಿಗೆ ಆಕೆ ಕಾಲುವೆಗೆ ಹಾರಿದ್ದು, ಆತ ಬದುಕುಳಿದು ಆಕೆ ಸಾವನ್ನಪ್ಪಿದ ದುರಂತ ಕಥೆ ಬಯಲಾಗುತ್ತದೆ.

Share this Video
  • FB
  • Linkdin
  • Whatsapp

ಅವಳು ಚಂದನದ ಗೊಂಬೆ.. ಮುದ್ದಾದ ಹೆಣ್ಣುಮಗಳು. ವಯಸ್ಸು 19. ಡಿಗ್ರಿ ಓದುತ್ತಿದ್ದಳು.. ಆದ್ರೆ ಆವತ್ತೊಂದು ದಿನ ಕಾಲೇಜಿಗೆ ಅಂತ ಹೋದ ಹೆಣ್ಣುಮಗಳು ವಾಪಸ್​ ಆಗೋದಿಲ್ಲ. ಯಾರೋ ಒಬ್ಬ ಕಾಲ್​ ಮಾಡಿ ನಿಮ್ಮ ಮಗಳು ಕಾಲುವೆಯಲ್ಲಿ ಬಿದ್ದಿದ್ದಾಳೆ ಅಂದ. ಪೋಷಕರು ಹೋಗಿ ನೋಡಿದ್ರೆ ಆ ಹೆಣ್ಣುಮಗಳ ಶವ ಸಿಗೋದಿಲ್ಲ. ಮೂರು ದಿನ ನಿರಂತರವಾಗಿ ಹುಡುಕಿದ ಮೇಲೆ ಮೃತದೇಹ ಸಿಗುತ್ತೆ. ಪೊಲೀಸ್​​ ಕೇಸ್​​ ಆಗುತ್ತೆ. ಆ ಯುವತಿ ಯಾಕೆ ಕಾಲುವೆಗೆ ಬಿದ್ಲು ಅಂತ ಕೆದಕಿದಾಗ ಅಲ್ಲೊಂದು ಪ್ರೇಮ ಕಥೆ ತೆರೆದುಕೊಳ್ಳುತ್ತೆ. ಅಷ್ಟಕ್ಕೂ ಆಕೆ ಕಾಲುವೆಗೆ ಹೇಗೆ ಬಿದ್ದಳು? ಆ ಹೆಣ್ಣುಮಗಳು ಕಾಲುವೆಗೆ ಹಾರಿದ್ದೇಕೆ.? ಒಂದು ಮುದ್ದಾದ ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆಯ ಹಿಂದಿನ ರೋಚಕ ಮಿಸ್ಟರಿಯೇ ಇಂದಿನ ಸುವರ್ಣ ಎಫ್‌ಐಆರ್..

ನಿನ್ನೆ ಇದ್ದ ಸ್ನೇಹಿತ ಇವತ್ತಿಲ್ಲ ಅಂದರೆ ಹೇಗಾಗಬೇಡ ಇವರುಗಳಿಗೆ. ಇವರೇ ಇಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆಂದರೆ ಇನ್ನೂ ಆಕೆಯ ಕುಟುಂಬದ ಕಥೆ ಏನು.? ಅಷ್ಟಕ್ಕೂ ಸ್ವಾತಿ ಕಾಲುವೆಗೆ ಹಾರಿದ್ದೇಕೆ? ಈತನ ಜೊತೆ ನೀರಿಗೆ ಹಾರಿದ ಆ ಸೂರ್ಯ ಯಾರು.? ಪಿತೃಪಕ್ಷದ ದಿನ ಕಾಲುವೆ ಬಳಿ ನಡೆದಿದ್ದೇನು..? ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲ ಮೂಡಿಸಿದೆ. ಆಗ ಅವರಿಬ್ಬರ ಪ್ರೇಮ ಕಥೆ ತೆರೆದುಕೊಳ್ಳುತ್ತದೆ.

ಅವರಿಬ್ಬರೂ ಒಂದೇ ಗ್ರಾಮದವರು. ಅಕ್ಕಪಕ್ಕದ ಮನೆಯವರು. ಬೆಂಗಳೂರಿನಲ್ಲಿದ್ದ ಸೂರ್ಯ ಆಗ್ಗಾಗೆ ಊರಿಗೆ ಹೋಗ್ತಿದ್ದ. ಈ ಟೈಮಿನಲ್ಲೆ ಸ್ವಾತಿಯ ಪರಿಚಯವಾಗುತ್ತದೆ. ನಂತರ ಇಬ್ಬರೂ ಸ್ನೇಹಿತರಾಗ್ತಾರೆ. ನಂತರ ಸ್ನೇಹ ಕೆಲವೇ ದಿನಗಳಲ್ಲಿ ಪ್ರೀತಿಗೆ ತಿರುಗಿ, ಇಬ್ಬರೂ ಲವ್ವಲ್ಲೂ ಬೀಳ್ತಾರೆ. ಆದರೆ ಇವರಿಬ್ಬರ ಲವ್‌​​ಗೆ ಸ್ವಾತಿ ಹೆತ್ತವರ ವಿರೋಧವಿರುತ್ತದೆ. ಇದಕ್ಕೆ ಬೇಸತ್ತಿದ್ದ ಹುಡುಗ ಕಳೆದ ಒಂದುವರೆ ತಿಂಗಳ ಹಿಂದೆ ವಿಷ ಕುಡಿದು ಕಾಲುವೆಗೆ ಹಾರುತ್ತೇನೆ ಅಂತ ಹೋಗಿದ್ದನು. ಆಗ ಗ್ರಾಮಸ್ಥರು ಬುದ್ಧಿ ಮಾತು ಹೆಳಿ ಕಳಿಸಿದ್ದರು. ಈ ಟೈಮಿನಲ್ಲಿ ಸೂರ್ಯನ ಹೆತ್ತವರು ಪರ್ಮನೆಂಟಾಗಿ ಆತನನ್ನ ಬೆಂಗಳೂರಿಗೆ ಕಳಿಸಿಬಿಟ್ಟಿದ್ದರು. ಆದರೆ, ಪಿತೃಪಕ್ಷಕ್ಕೆ ಅಂತ ಮನೆಗೆ ಬಂದಾಗ ಮತ್ತೆ ಸ್ವಾತಿಯನ್ನ ಕಾಂಟ್ಯಾಕ್ಟ್​​ ಮಾಡಿದ್ದಾನೆ. ಇಬ್ಬರೂ ಸಿನಿಮಾಗೆ ಹೋಗಿ ಬಂದಿದ್ದಾರೆ. ಇದಾದ ಮರುದಿನ, ನಮ್ಮಿಬ್ಬರನ್ನೂ ಒಂದಾಗಿ ಬಾಳಲು ಮನೆಯವರು ಬಿಡುವುದಿಲ್ಲವೆಂದು ಕಾಲುವೆಗೆ ಹಾರಿದ್ದಾರೆ.

ಆದರೆ, ಅದೃಷ್ಟವಶಾತ್ ಕಾಲುವೆಯಲ್ಲಿ ಮುಳುಗಿ ಹೋಗುತ್ತಿದ್ದಾಗ ಈಜುತ್ತಾ ಅಲ್ಲಿ ಸಿಕ್ಕ ಮರದ ದಿಮ್ಮಿಯೊಂದನ್ನು ಹಿಡಿದು ಪ್ರಾಣ ಉಳಿಸಿಕೊಂಡಿದ್ದಾನೆ. ಆದರೆ, ಈತನನ್ನು ನಂಬಿ ಸಾವಿಗೂ ನಿನ್ನ ಜೊತೆಯಲ್ಲಿ ಬರುತ್ತೇನೆಂದು ಕಾಲುವೆಗೆ ಹಾರಿದ ಯುವತಿ ಸತ್ತು ಶವವಾಗಿದ್ದಾಳೆ. ಒಂದು ವೇಳೆ ಇದು ಇಬ್ಬರೂ ದುಡುಕಿ ನಿರ್ಧಾರ ತಗೆದುಕೊಂಡಿದ್ದರೆ ಬೇಸರದ ಸಂಗತಿ. ಆದರೆ ಗ್ರಾಮದವರ ಆರೋಪದಂತೆ ಈತೇ ಏನಾದ್ರೂ ಮಾಡಿದ್ದರೆ ಈ ಪಾಪಿಗೆ ತಕ್ಕ ಶಿಕ್ಷೆಯಾಗಲಿ. ಇನ್ಮುಂದೆ ಹೆಣ್ಣುಮಕ್ಕಳ ಜೀವನದಲ್ಲಿ ಆಟವಾಡೋ ಇಂಥವರಿಗೆ ತಕ್ಕ ಪಾಟವಾಗಲಿ. ಇನ್ನೂ ಹದಿಹರಿಯದ ವಯಸಲ್ಲಿ ಲವ್​​​​ ಗಿವ್ವು ಅಂತ ತಲೆಕೆಡಸಿಕೊಳ್ಳೋ ಯುವಜನತೆಗೆ ಹುಷಾರ್​ ಅಂತ ಹೇಳ್ತಾ ಇವತ್ತಿನ ಎಪಿಸೋಡ್​​ ಮುಗಿಸುತ್ತಿದ್ದೇನೆ.

Related Video