ಕನ್ನಡದಲ್ಲಿಯೇ ಕಮಾಂಡ್ ಪಡೆದು ಕೆಲಸ ಮಾಡುತ್ತಿದ್ದ ಗೌರಿ ಇನ್ನಿಲ್ಲ: ಕಣ್ಣೀರಲ್ಲಿ ಶಿವಮೊಗ್ಗ ಪೊಲೀಸರು

ಅಪರಾಧ ಪತ್ತೆಯಲ್ಲಿ ತೊಡಗಿದ್ದ ಪೊಲೀಸ್ ಡಾಗ್ ಗೌರಿ ಮರಣ
ಅಂತಿಮ ಗೌರವ ಸಲ್ಲಿಸಿದ ಎಸ್‌ಪಿ ಜಿ.ಕೆ. ಮಿಥುನ್‌ ಕುಮಾರ್
ಶಿವಮೊಗ್ಗ ಪೊಲೀಸ್ ಇಲಾಖೆಯ ಅಚ್ಚುಮೆಚ್ಚಿನ ಶ್ವಾನ ಗೌರಿ

First Published May 11, 2023, 3:04 PM IST | Last Updated May 11, 2023, 3:14 PM IST

ಶಿವಮೊಗ್ಗ: ಅಪರಾಧ ಪತ್ತೆಯಲ್ಲಿ ತೊಡಗಿದ್ದ ಪೊಲೀಸ್ ಡಾಗ್ ಗೌರಿ ಮರಣ ಹೊಂದಿದೆ.  ಈ ಗೌರಿ ಶಿವಮೊಗ್ಗ ಪೊಲೀಸ್ ಇಲಾಖೆಯ ಅಚ್ಚುಮೆಚ್ಚಿನ ಶ್ವಾನವಾಗಿತ್ತು. ಇದಕ್ಕೆ ಎಸ್ಪಿ ಜಿ.ಕೆ. ಮಿಥುನ್‌ ಕುಮಾರ್ ಅಂತಿಮ ಗೌರವ ಸಲ್ಲಿಸಿದರು. ಈ ಶ್ವಾನ ಪೊಲೀಸರಿಗೆ 312 ಪ್ರಕರಣಗಳಲ್ಲಿ ನೆರವಾಗಿತ್ತು. ಲ್ಯಾಬ್ರಡಾರ್ ರಿಟೀವ‌ ತಳಿಯ ಗೌರಿ (11) 36 ಪ್ರಕರಣಗಳಲ್ಲಿ ಪೊಲೀಸರಿಗೆ ನೆರವಾಗಿತ್ತು. ಅಲ್ಲದೇ ಅಪರಾದ ಪತ್ತೆಯಲ್ಲಿ ಇದು ಎತ್ತಿದ ಕೈ ಆಗಿತ್ತು. ಆ. 3, 2012ರಂದು ಹುಟ್ಟಿದ್ದ ಗೌರಿ, 2013ರಲ್ಲಿ ಅಪರಾಧ ಪತ್ತೆ ದಳಕ್ಕೆ ಸೇರಿತ್ತು. ಕನ್ನಡದಲ್ಲಿಯೇ ಕಮಾಂಡ್ ಪಡೆದು ಕೆಲಸ ಮಾಡುತ್ತಿದ್ದ ಗೌರಿ, ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿತ್ತು. ಗೌರಿ ಸಾವು ಪೊಲೀಸ್‌ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಡಿಎಆರ್ ಮೈದಾನದಲ್ಲಿ ಗೌರಿಗೆ ಅಂತಿಮ ಗೌರವ ಸಲ್ಲಿಕೆ ಮಾಡಲಾಯಿತು.

ಇದನ್ನೂ ವೀಕ್ಷಿಸಿ: Karnataka Election: ಪಕ್ಷಗಳ ಪಡಸಾಲೆಯಲ್ಲಿ ಚಿಂತನ-ಮಂಥನ: ಪಾಸಿಟಿವ್‌ ಮೂಡ್‌ನಲ್ಲೇ 3 ಪಕ್ಷಗಳು

Video Top Stories