Asianet Suvarna News Asianet Suvarna News

ಚಿಕ್ಕಬಳ್ಳಾಪುರ: ಹಾವು ತಪ್ಪಿಸಲು ಹೋಗಿ ಟ್ರಕ್‌ ಚಾಲಕ ಎಡವಟ್ಟು, ಸರಣಿ ಅಪಘಾತ

ಹಾವು ತಪ್ಪಿಸಲು ಹೋಗಿ ಟ್ರಕ್‌ ಚಾಲಕ ಎಡವಟ್ಟು ಮಾಡಿದ್ದರಿಂದ ಸರಣಿ ಅಪಘಾತ ಸಂಭವಿಸಿದ ಘಟನೆ ಚಿಕ್ಕಬಳ್ಳಾಪುರ ನಗರದ ಅಗಲಕುರ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ನಡೆದಿದೆ. 

ಚಿಕ್ಕಬಳ್ಳಾಪುರ(ಡಿ.07):  ಹಾವು ತಪ್ಪಿಸಲು ಹೋಗಿ ಟ್ರಕ್‌ ಚಾಲಕ ಎಡವಟ್ಟು ಮಾಡಿದ್ದರಿಂದ ಸರಣಿ ಅಪಘಾತ ಸಂಭವಿಸಿದ ಘಟನೆ ಚಿಕ್ಕಬಳ್ಳಾಪುರ ನಗರದ ಅಗಲಕುರ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ನಡೆದಿದೆ. ಟ್ರಕ್‌, ಟಾಟಾ ಏಸ್‌, ಕಾರು ನಡುವೆ ಸರಣಿ ಅಪಘಾತ ಸಂಭವಿಸಿದೆ. ಟ್ರಕ್‌ ಅಡ್ಡ ಬಂದ ಹಾವು ಉಳಿಸಲು ಹೋಗಿ ಬ್ರೇಕ್‌ ಹಾಕಿದ್ದರಿಂದ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರದ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಲಗೇಜ್ ಮಾಯ, ರಾಣಾ ರಣ.. ರಣ.. ಫ್ಲೈಟ್‌ನಲ್ಲಿ ರಾಣಾ ಲಗೇಜ್ ಮಿಸ್ಸಿಂಗ್!