Asianet Suvarna News Asianet Suvarna News

ಲಗೇಜ್ ಮಾಯ, ರಾಣಾ ರಣ.. ರಣ.. ಫ್ಲೈಟ್‌ನಲ್ಲಿ ರಾಣಾ ಲಗೇಜ್ ಮಿಸ್ಸಿಂಗ್!

ಬಾಹುಬಲಿ ಬಲ್ಲಾಳರಾಯ ರಾಣ ದಗ್ಗುಬಾಟಿ ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ತೊಡಗಿದ್ದಾರೆ. ಖಾಸಗಿ ಕೆಲಸಗಳ ಸಲುವಾಗಿ ಅವರು ಆಗಾಗ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ. ಇತ್ತೀಚೆಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡಿದ ಅವರಿಗೆ ಕೆಟ್ಟ ಅನುಭವ ಆಗಿದೆ.

ಬಾಹುಬಲಿ ಬಲ್ಲಾಳರಾಯ ರಾಣ ದಗ್ಗುಬಾಟಿ ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ತೊಡಗಿದ್ದಾರೆ. ಖಾಸಗಿ ಕೆಲಸಗಳ ಸಲುವಾಗಿ ಅವರು ಆಗಾಗ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ. ಇತ್ತೀಚೆಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡಿದ ಅವರಿಗೆ ಕೆಟ್ಟ ಅನುಭವ ಆಗಿದೆ. ಆ ಬಗ್ಗೆ ಅವರು ಗರಂ ಆಗಿದ್ದಾರೆ. ಪ್ರಯಾಣಿಸುವಾಗ ರಾಣಾ ದಗ್ಗುಬಾಟಿ ಅವರ ಲಗೇಜ್​ ಮಾಯವಾಗಿದೆ. ಇದರಿಂದ ಕೋಪಕೊಂಡ ಅವರು ನೇರವಾಗಿ ಟ್ವೀಟ್​ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದರು. ತಮಗೆ ಆದ ಕೆಟ್ಟ ಅನುಭವವನ್ನು ಜಗಜ್ಜಾಹೀರು ಮಾಡಿದ್ದರು. ಇದರಿಂದ ಇಂಡಿಗೋ ಕಂಪನಿಗೆ ಮುಜುಗರ ಆಗಿದೆ. ಅನಂತರ  ಇಂಡಿಗೋ ಕಡೆಯಿಂದ ಈ ರೀತಿಯ ಪ್ರತಿಕ್ರಿಯೆ ಬಂದ ಬಳಿಕ ರಾಣಾ ದಗ್ಗುಬಾಟಿ ಅವರು ತಮ್ಮ ಟ್ವೀಟ್​ ಡಿಲೀಟ್​ ಮಾಡಿದ್ದಾರೆ. ಒಟ್ಟಾರೆ ಈ ಘಟನೆ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಇದೀಗ ಚರ್ಚೆ ಶುರುವಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment