ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸಿಕ್ತು ಮಹತ್ವದ ಸಾಕ್ಷ್ಯ! ದರ್ಶನ್‌ ಗ್ಯಾಂಗ್‌ ಬಚಾವ್‌ ಆಗಲು ಸಾಧ್ಯವೆ ಇಲ್ವಾ?

ರೇಣುಕಾಸ್ವಾಮಿ ಮೃತದೇಹ ಸಾಗಿಸಿದ ಬಳಿಕ ಸ್ಕಾರ್ಪಿಯೋ ವಾಹನವನ್ನ ಆರೋಪಿಗಳು ವಾಟರ್ ಸರ್ವೀಸ್ ಮಾಡಿಸಿದ್ದರು. ಇದೀಗ ವಾಟರ್ ಸರ್ವೀಸ್‌ ಮಾಡಿದ ಇಬ್ಬರು ಹುಡುಗರನ್ನು ಇದೀಗ ಪೊಲೀಸರು ಸಾಕ್ಷ್ಯ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ(Renukaswamy murder case) ಸಂಬಂಧಿಸಿದಂತೆ ಶವ ಸಾಗಿಸಿದ ವಾಹನ‌ವನ್ನು ತೊಳೆದವರು ಈಗ ಸಾಕ್ಷ್ಯವಾಗಿದ್ದಾರೆ. ಸ್ಕಾರ್ಪಿಯೋ ವಾಹನ ತೊಳೆದವರನ್ನು ಪೊಲೀಸರು (Police) ಸಾಕ್ಷಿ ಮಾಡಿದ್ದಾರೆ. ಪಟ್ಟಣಗೆರೆ ಶೆಡ್‌ನಿಂದ (Pattanagere Shed) ಸ್ಕಾರ್ಪಿಯೋದಲ್ಲಿ ರೇಣುಕಾಸ್ವಾಮಿ ಮೃತದೇಹ ಸಾಗಾಟ ಮಾಡಿದ್ರು. ನಂತರ ಈ ಸ್ಕಾರ್ಪಿಯೋ ವಾಹನವನ್ನ ಆರೋಪಿಗಳು ವಾಟರ್ ಸರ್ವೀಸ್ ಮಾಡಿಸಿದ್ದರು. ಇಬ್ಬರು ಹುಡುಗರು ಈ ವಾಹನವನ್ನ ವಾಟರ್ ಸರ್ವೀಸ್ ಮಾಡಿದ್ರು. ವಾಟರ್ ಸರ್ವೀಸ್‌ನಲ್ಲಿ ಇಬ್ಬರು ಹುಡುಗರು ಕೆಲಸ ಮಾಡುತ್ತಿದ್ದರು. ಸದ್ಯ ಇಬ್ಬರು ಯುವಕರು ಕಾರಿನಲ್ಲಿ ರಕ್ತದ ಕಲೆಗಳು ಇದ್ದ ಬಗ್ಗೆ ಸಾಕ್ಷಿ ನುಡಿದಿದ್ದಾರೆ. ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ಪೊಲೀಸರು ಸಾಕ್ಷಿ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ , ಡಿಲೀಟ್ ಆಗಿದ್ದ ಎಲ್ಲ ಸಿಸಿಟಿವಿ(CCTV) ಡಿವಿಆರ್‌ಗಳನ್ನು ರಿಟ್ರೀವ್ ಮಾಡಲಾಗಿದೆ. ಎಫ್‌ಎಸ್ಎಲ್(FSL) ಮುಖಾಂತರ ಪೊಲೀಸರು ರಿಟ್ರೀವ್ ಮಾಡಿದ್ದಾರೆ. ಸ್ಟೋನಿ ಬ್ರೂಕ್ ರೆಸ್ಟೋರೆಂಟ್, ಪವಿತ್ರಾಗೌಡ ಮನೆ, ದರ್ಶನ್ ಮನೆ, ಪ್ರದೂಶ್ ಮನೆ ಬಳಿ ಡಿವಿಆರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ಕು ಕಡೆ ಸಿಸಿಟಿವಿ ವಿಶ್ಯುಲ್‌ನನ್ನು ಆರೋಪಿಗಳು ಡಿಲೀಟ್‌ ಮಾಡಿದ್ದಾರೆ. ಸದ್ಯ ಎಲ್ಲ ಡಿವಿಆರ್‌ಗಳನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ಸದ್ಯ ಆರೋಪಿಗಳ ಚಲನವಲನದ ಸಂಪೂರ್ಣ ಮಾಹಿತಿ ಡಿವಿಆರ್‌ಗಳು ನೀಡಿವೆ.

ಇದನ್ನೂ ವೀಕ್ಷಿಸಿ: ವಾಲ್ಮೀಕಿ ಹಗರಣ ಆರೋಪ ಬೇರೆಯವರ ಮೇಲೆ ಹಾಕಲು ಹೀಗೆ ಹೇಳ್ತಿದ್ದೀರಿ: ಸಿಎಂ ವಿರುದ್ಧ ಕೋಟಾ ಶ್ರೀನಿವಾಸ್ ಪೂಜಾರಿ ಕಿಡಿ

Related Video