ವಾಲ್ಮೀಕಿ ಹಗರಣ ಆರೋಪ ಬೇರೆಯವರ ಮೇಲೆ ಹಾಕಲು ಹೀಗೆ ಹೇಳ್ತಿದ್ದೀರಿ: ಸಿಎಂ ವಿರುದ್ಧ ಕೋಟಾ ಶ್ರೀನಿವಾಸ್ ಪೂಜಾರಿ ಕಿಡಿ

ವಾರದೊಳಗೆ ನಿಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದ ಸಂಸದ
ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಎದುರು ಧರಣಿ ಕೂರುವೆ
ಪ್ರಜಾಪ್ರಭುತ್ವದಲ್ಲಿ ಸತ್ಯಕ್ಕೆ ಅಪಚಾರವಾಗಬಾರದು ಕೋಟಾ ಕಿಡಿ

Share this Video
  • FB
  • Linkdin
  • Whatsapp

ಸಿದ್ದರಾಮಯ್ಯ (Siddaramaiah)ವಿರುದ್ಧ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ(MP Kota Srinivas Poojary) ಕಿಡಿಕಾರಿದ್ದಾರೆ. ಬಿಜೆಪಿ ಸರ್ಕಾರದ (BJP government) ಹಗರಣಗಳ ಬಗ್ಗೆ ಸದನದಲ್ಲಿ ಸಿಎಂ ಪ್ರಸ್ತಾಪ ಮಾಡಿದ್ದಾರೆ. ಗಂಗಾ ಕಲ್ಯಾಣ ಯೋಜನೆ, ಭೋವಿ ನಿಗಮದಲ್ಲಿ ಹಗರಣವಾಗಿದೆ ಎಂದು ಆರೋಪಿಸಿದ್ದಾರೆ. ಈ ಸಿಎಂ ಆರೋಪಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ. ನಾನು ಮಂತ್ರಿಯಾಗಿದ್ದಾಗ ನೀವು ವಿಪಕ್ಷ ನಾಯಕರಿದ್ರಿ ಆಗ ಧ್ವನಿ ಎತ್ತಿಲ್ಲ. ಈಗ ವಾಲ್ಮೀಕಿ ಹಗರಣ ಆರೋಪ ಬೇರೆಯವರ ಮೇಲೆ ಹಾಕಲು ಹೀಗೆ ಹೇಳ್ತಿದ್ದೀರಿ. ನನ್ನ ಹೆಸರು ಉಲ್ಲೇಖಿಸಿರುವುದನ್ನು ವಾಪಾಸ್ ಪಡೆಯಿರಿ. ಒಂದು ರೂಪಾಯಿ ಅವ್ಯವಹಾರ ಮಾಡಿದ್ರು ಸಿಬಿಐ(CBI)ತನಿಖೆ ಮಾಡಿಸಿ, ನಾನು ತಪ್ಪು ಮಾಡಿದರೆ ಏನು ಶಿಕ್ಷೆ ಬೇಕಾದರು ಕೊಡಬಹುದಿತ್ತು. ಪರಿಶಿಷ್ಟ ಪಂಗಡದ ಹಣವನ್ನು ಬೇರೆ ರಾಜ್ಯದ ಚುನಾವಣೆಗೆ ಕೊಟ್ಟಿದ್ದೀರಿ. ಹಿಂದಿನ ಸರ್ಕಾರದಲ್ಲಿ ಅಪರಾಧವೇ ಮಾಡದ ಪ್ರಕರಣಗಳನ್ನು ಹೇಳುತ್ತಿದ್ದೀರಿ. ನಿಮ್ಮ ಹಗರಣಗಳನ್ನ ಮುಚ್ಚಿಕೊಳ್ಳಲು ಇಲ್ಲಸಲ್ಲದ ಆರೋಪ ಮಾಡ್ತಿದ್ದೀರಿ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಕಿಡಿಕಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  Weekly Horoscope: ಇಂದು ಗುರು ಪೂರ್ಣಿಮಾ ಇದ್ದು, 12 ರಾಶಿಗಳ ವಾರದ ಭವಿಷ್ಯ ಹೀಗಿದೆ ?

Related Video