ಪಾಠ ಬಿಟ್ಟು ಪ್ರತಿಭಟನೆಗೆ ಇಳಿದ ಶಿಕ್ಷಕರು..! ಮೂರು ತಿಂಗಳು ಸಂಬಳವಿಲ್ಲದೇ ಪರದಾಟ..!
ಬಹುದಿನಗಳಿಂದ ಆ ಶಾಲೆ ಶಿಕ್ಷಕರು ಹಬ್ಬ ಹರಿದಿನಗಳನ್ನು ಮಾಡದೇ, ಮನೆ ಬಾಡಿಗೆಯೂ ಕಟ್ಟಲಾಗದೆ ಪರದಾಟ ನಡೆಸುತ್ತಿದ್ರು.. ಶಾಲಾ ಆಡಳಿತ ಮಂಡಳಿಯ ಬೇಜವಾಬ್ದಾರಿಯಿಂದ ಹೈರಾಣಾಗಿದ್ದ ಶಿಕ್ಷಕರು ಸಿಡಿದೆದ್ರು.
ಮಕ್ಕಳಿಗೆ ಪಾಠ ಮಾಡೋದು ಬಿಟ್ಟು ಪ್ರತಿಭಟನೆಗೆ(Protest) ಕೂತ ಶಿಕ್ಷಕರು. ಕಚೇರಿ ಕೆಲಸ ತ್ಯಜಿಸಿ ಧರಣಿ ಕುಳಿತ ಶಾಲಾ ಸಿಬ್ಬಂದಿ.. ಈ ದೃಶ್ಯ ಕಂಡು ಬಂದಿದ್ದು ಹಾವೇರಿಯಲ್ಲಿ. ಹಾವೇರಿಯ(Haveri) ಲಯನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್(Lions English Medium School) ಹಾಗೂ ಲಯನ್ಸ್ ಪದವಿಪೂರ್ವ ಕಾಲೇಜಿನ ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ಸಂಬಳವನ್ನೇ ನೀಡಿಲ್ವಂತೆ. ಹೀಗಾಗಿ ಶಿಕ್ಷಕರು(Teacher) ಹಾಗೂ ಸಿಬ್ಬಂದಿ ತರಗತಿ ಬಹಿಷ್ಕರಿಸಿ ಮೌನ ಪ್ರತಿಭಟನೆಗೆ ಇಳಿದಿದ್ದಾರೆ. ಸುಮಾರು 90 ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗೆ ಮೂರು ತಿಂಗಳಿಂದ ಸಂಬಳ ಕೊಟ್ಟಿಲ್ಲ. ದೀಪಾವಳಿ ಹಬ್ಬವನ್ನೂ ಸರಿಯಾಗಿ ಆಚರಿಸೋಕೆ ಆಗಿಲ್ಲ.. ಹಣವಿಲ್ಲದೆ ಕುಟುಂಬ ನಿರ್ವಹಣೆಯೂ ಕಷ್ಟವಾಗುತ್ತಿದೆ.. ಕೂಡಲೇ ಸಂಬಳ ನೀಡಿ ಎಂದು ಕೆಲಸ ಬಿಟ್ಟು ಗಾಂಧಿ ಫೋಟೊ ಇಟ್ಟುಕೊಂಡು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಗೆ ಯಾವುದೇ ರೀತಿ ಹಣಕಾಸಿನ ತೊಂದರೆ ಇಲ್ಲ. ನವೆಂಬರ್ 4ರಂದು ಖಜಾಂಚಿ ಸಹಿ ಮಾಡಿದ್ದರೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಮುದಗಲ್ ಸಂಬಳ ಪಾವತಿಗೆ ಸಹಿ ಮಾಡಿಲ್ಲ.. ಸುಖಾ ಸುಮ್ಮನೆ ಸಂಬಳ ನೀಡಲು ಸತಾಯಿಸುತ್ತಿದ್ದಾರೆ ಅನ್ನೋದು ಪ್ರತಿಭಟನಾ ನಿರತರ ಆರೋಪವಾಗಿದೆ. ಶಿಕ್ಷಕರು, ಸಿಬ್ಬಂದಿ ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಿಇಓ ಮೌನೇಶ್ ಬಡಿಗೇರ್ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಶಿಕ್ಷಕರ ಜೊತೆಗೆ ಮಾತುಕತೆ ನಡೆಸಿದ್ರು. ಬಳಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವಬಸಪ್ಪ ಮುದಗಲ್ ಕರೆಸಿ ಮಾತುಕತೆ ನಡೆಸಿದ್ರು. ಚೇರಮನ್ ಶಾಲೆಯ ಮೈದಾನಕ್ಕೆ ಆಗಮಿಸುತ್ತಿದ್ದಂತೆ ಶಿಕ್ಷಕರು ತರಾಟೆಗೆ ತೆಗೆದುಕೊಂಡರು. ಬಳಿಕ ಸಂಬಳ ಬಿಡುಗಡೆ ಮಾಡೋದಾಗಿ ಚೇರ್ಮನ್ ಭರವಸೆ ನೀಡಿದ್ದಾರೆ.
ಇದನ್ನೂ ವೀಕ್ಷಿಸಿ: ಶಕ್ತಿ ದೇವತೆ ಹಾಸನಾಂಬೆಗೆ ಭಕ್ತರ ಭರಪೂರ ಕಾಣಿಕೆ: 14 ದಿನದಲ್ಲಿ ಹರಿದುಬಂದ ಆದಾಯ ಎಷ್ಟು ?