ಶಕ್ತಿ ದೇವತೆ ಹಾಸನಾಂಬೆಗೆ ಭಕ್ತರ ಭರಪೂರ ಕಾಣಿಕೆ: 14 ದಿನದಲ್ಲಿ ಹರಿದುಬಂದ ಆದಾಯ ಎಷ್ಟು ?

ವರ್ಷಕ್ಕೊಮ್ಮೆ ದರ್ಶನ ನೀಡೋ‌ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆಬಿದ್ದಿದೆ, ಭಕ್ತರು ಹರಕೆ ರೂಪದಲ್ಲಿ ನೀಡಿದ್ದ ಹುಂಡಿ ಹಣವನ್ನ ಎಣಿಕೆ ಮಾಡಲಾಯಿತು. ಹಾಸನಾಂಬೆ ಉತ್ಸವದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದಾಖಲೆಯ ಆದಾಯ ಹರಿದುಬಂದಿದೆ.
 

First Published Nov 17, 2023, 11:11 AM IST | Last Updated Nov 17, 2023, 11:11 AM IST

ಹಾಸನದ ಅಧಿದೇವತೆ, ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನಾಂಬೆ ಜಾತ್ರಾ( Hasanamba) ಮಹೋತ್ಸವಕ್ಕೆ ತೆರೆಬಿದ್ದಿದೆ. ನವೆಂಬರ್ 02 ರಿಂದ 14ರವರೆಗೆ ನಡೆದ ಜಾತ್ರಾ ಮಹೋತ್ಸವದಲ್ಲಿ 14.20 ಲಕ್ಷ ಜನ ಹಾಸನಾಂಬೆ ದರ್ಶನ ಪಡೆದು ಪುನೀತರಾಗಿದ್ದಾರೆ. ಇನ್ನು ಜಾತ್ರಾ ಮಹೋತ್ಸವ ವೇಳೆ ಹಾಸನಾಂಬೆಗೆ ಭಾರೀ ಪ್ರಮಾಣದಲ್ಲಿ ಕಾಣಿಕೆ ಹಾಕಿದ್ದಾರೆ. ಭಕ್ತರು ಹರಕೆ‌ ರೂಪದಲ್ಲಿ ಹುಂಡಿಗೆ ಹಾಕಿದ್ದ ಹಣವನ್ನ ಎಣಿಕೆ ಮಾಡಲಾಯ್ತು. 
ಈಡೀ ದಿನ ಹುಂಡಿ ಹಣವನ್ನ ಎಣಿಕೆ ಮಾಡಲಾಯಿತು. 2.5 ಕೋಟಿ ಹಣ ಹುಂಡಿಯಿಂದ ಬಂದಿದ್ದು, 20 ಲಕ್ಷ ಹಣ ಇ - ಹುಂಡಿಯಿಂದ ಬಂದಿದೆ. ಎಲ್ಲಾ ಮೂಲಗಳಿಂದ ಬರೋಬ್ಬರಿ 8.72 ಕೋಟಿ ಆದಾಯ ಹರಿದುಬಂದಿದೆ. 8.72 ಕೋಟಿ ಆದಾಯ ಬಂದಿದ್ದು, ಕಳೆದ ಬಾರಿಗೆ ಹೋಲಿಸಿದ್ರೆ ಈ ಬಾರಿ ಆದಾಯ ದುಪ್ಪಟ್ಟಾಗಿದೆ. ಇನ್ನು ದೇವಿ ದರ್ಶನದ ಟಿಕೆಟ್(Ticket), ಪ್ರಸಾದದಿಂದ ಬರೋಬ್ಬರಿ 6.15 ಕೋಟಿ ಆದಾಯ(Income) ಬಂದಿದೆ.‌ 1000ರೂ. ಟಿಕೆಟ್ನಿಂದ 3.09 ಕೋಟಿ, 300ರೂ. ಟಿಕೆಟ್ನಿಂದ 2.35 ಕೋಟಿ ಹಾಗೂ ಲಾಡುಪ್ರಸಾದದಿಂದ 70.23 ಲಕ್ಷ ಆದಾಯ ಬಂದಿದೆ. ಹಾಸನಾಂಬ ದೇಗುಲ(Hasanamba temple) ಮುಜರಾಯಿ ಇಲಾಖೆಗೆ ಸೇರೋದ್ರಿಂದ ಎಲ್ಲಾ ಹಣವನ್ನ ದೇವಾಲಯದ ಖಾತೆಗೆ ವರ್ಗಾಯಿಸಲಾಗುತ್ತದೆ. ಭಕ್ತರು ಕಾಣಿಕೆ ರೂಪದಲ್ಲಿ ನೀಡಿರೋ ಈ ಹಣವನ್ನ ದೇವಾಲಯದ ಅಭಿವೃದ್ಧಿಗೆ ಬಳಸಲಾಗುತ್ತದೆ. ಹಾಸನಾಂಬ ಜಾತ್ರಾ ಮಹೋತ್ಸವದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಆದಾಯ ಸಂಗ್ರಹವಾಗಿದೆ. ಕಳೆದ ಜಾತ್ರಾ ಮಹೋತ್ಸವಗಳಿಗೆ ಹೋಲಿಕೆ ಮಾಡಿದ್ರೆ ಆದಾಯ ದುಪ್ಪಟ್ಟಾಗಿದೆ. 

ಇದನ್ನೂ ವೀಕ್ಷಿಸಿ:  ಕಾಮಗಾರಿ ನೆಪದಲ್ಲಿ ಕೋಟಿ ಕೋಟಿ ಖರ್ಚು? ಹಣ ಹೊಡೆಯಲು ಮುಂದಾದ್ರ ವಿವಿ ಕುಲಪತಿ?

Video Top Stories