ಕೊಳಚೆ ನೀರಿನಲ್ಲಿ ಕೊಚ್ಚಿ ಹೋಯ್ತು 33 ಕೋಟಿ ಅನುದಾನ: ಹು-ಧಾ ಮಹಾನಗರ ಪಾಲಿಕೆಯಲ್ಲಿ ನೀರಿನ ಮಹಾ ಹಗರಣ..?

ಹುಬ್ಬಳ್ಳಿ-ಧಾರವಾಡ ಅವಳಿ ನಗರ ರಾಜ್ಯದ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆ.. ಜೊತೆಗೆ ದೇಶದ ಸ್ಮಾರ್ಟ್ ಸಿಟಿಗಳ ಪೈಕಿ ಹುಬ್ಬಳ್ಳಿ ಸಹ ಒಂದು. ಹೀಗಾಗಿ ಆಧುನಿಕತೆಗೆ ತಕ್ಕಂತೆ ಕೋಟ್ಯಂತರ ರೂಪಾಯಿ ಅನುದಾನ ನಗರದ ಅಭಿವೃದ್ಧಿಗೆ ಹರಿದು ಬರುತ್ತಿದೆ. ಆದರೆ ಹರಿದು ಬಂದ ಅನುದಾನ ಎಷ್ಟರಮಟ್ಟಿಗೆ ಸದ್ಬಳಕೆಯಾಗುತ್ತಿದೆ ಅಂತ ನೋಡೋಲು ಹೋದಾಗ ಸಿಕ್ಇದ್ದು ಬೆಚ್ಚಿ ಬೀಳಿಸುವ ಮಾಹಿತಿ. 

First Published Oct 20, 2023, 10:25 AM IST | Last Updated Oct 20, 2023, 10:25 AM IST

ಇದು  ಬಹುಕೋಟಿ ವೆಚ್ಚದ ಕೊಳಚೆ ನೀರು ಶುದ್ದೀಕರಣ ಘಟಕ. ಹುಬ್ಬಳ್ಳಿ(Hubbali) ನಗರದಲ್ಲಿ ಹರಿದು ಬರುವ ಕೊಳಚೆ ನೀರನ್ನು ಶುದ್ಧೀಕರಿಸಿ ನಿಸರ್ಗಕ್ಕೆ ಮರಳಿ ಬಿಡುವುದು. ಇದೇ ನೀರನ್ನು ಬಳಸಿ ರೈತರು(Farmer) ಕೃಷಿ ಮಾಡುವುದು ಇದರ ಉದ್ದೇಶ. ನಗರದ ಹೊರ ವಲಯದ ಹಳೆ ಗಬ್ಬೂರು ಸಮೀಪದಲ್ಲಿ ಮಹಾನಗರ ಪಾಲಿಕೆ 33 ಕೋಟಿ ವೆಚ್ಚ ಮಾಡಿ  ಎಸ್ ಟಿಪಿ ಪ್ಲಾಂಟ್ ಆರಂಭಿಸಿದೆ. ಆದ್ರೆ ನೀರು ಶುದ್ದೀಕರಿಸುವ ಕೆಲಸ ಮಾತ್ರ ಆಗ್ತಿಲ್ಲ. ಕಳೆದ ಏಳು ವರ್ಷದಿಂದ ಕಾಟಾಚಾರಕ್ಕೆ ಪ್ಲಾಂಟ್ ರನ್ ಮಾಡಲಾಗುತ್ತಿದೆ. ನೆಪ ಮಾತ್ರಕ್ಕೆ ಪ್ಲಾಂಟ್ ನಲ್ಲಿ ಕೊಳಚೆ ನೀರು ಸಂಗ್ರಹಿಸಿ, ಯಾರಾದರೂ ವೀಕ್ಷಣೆಗೆ ಹೋದಾಗ ನೀರು ಶುದ್ದೀಕರಿಸುವ ನಾಟಕ ಮಾಡ್ತಿದ್ದಾರೆ ಅನ್ನೋದು ಮಹಾನಗರ ಪಾಲಿಕೆ(Hubli-dharwad Municipal corporation) ವಿಪಕ್ಷ ನಾಯಕರ ಆರೋಪ. ಬೆಂಗಳೂರು ಮೂಲದ ಖಾಸಗಿ ಕಂಪನಿ ಇದರ ನಿರ್ವಹಣೆ ಗುತ್ತಿಗೆ ಪಡ್ಕೊಂಡಿದೆ. ಇಲ್ಲಿ ಶುದ್ದೀಕರಿಸಿದ ನೀರನ್ನು ಕುಡಿಯಲು ಹೊರೆತುಪಡಿಸಿ, ದಿನ ನಿತ್ಯದ ಬಳಕೆ, ಬೆಳೆಗಳಿಗೆ ನೀರುಣಿಸಲು ನೀಡಬೇಕೆಂಬ ಕರಾರು ಇದೆ. ಆದ್ರೆ‌ ಇಲ್ಲಿಯವರೆಗೆ ಹನಿ ನೀರು ಬಳಕೆಯಾಗಿಲ್ಲ. ಈ ಬಗ್ಗೆ ಸ್ವತಃ ಪಾಲಿಕೆ ಮೇಯರ್ಗೆ ಮಾಹಿತಿ ಇಲ್ಲ.. ಈಗ ನನ್ನ ಗಮನಕ್ಕೆ ಬರ್ತಾಯಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ತೀವಿ ಎನ್ನುತ್ತಿದ್ದಾರೆ ಮೇಯರ್(Mayor). ತ್ಯಾಜ್ಯ ನೀರನ್ನು ಸಂಸ್ಕರಿಸಿ ಅದರ ಸದ್ಬಳಕೆ ಮಾಡಿಕೊಳ್ಳುವ ಸದುದ್ದೇಶಕ್ಕೆ ಈ ಎಸ್.ಟಿಪಿ ಪ್ಲಾಂಟ್ ನಿರ್ಮಿಸಲಾಗಿದೆ. ಇದಕ್ಕಾಗಿ ಕೋಟಿ ಕೋಟಿ ಹಣ ಸುರಿಯಲಾಗಿದೆ. ಅದ್ರೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ, ಗುತ್ತಿಗೆದಾರ ಅಸಡ್ಡೆಯಿಂದ ಉದ್ದೇಶ ಈಡೆರುತ್ತಿಲ್ಲ. ಇನ್ನಾದ್ರೂ ಪಾಲಿಕೆ ಎಸ್.ಟಿಪಿ ಪ್ಲಾಂಟ್ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕಿದೆ.

ಇದನ್ನೂ ವೀಕ್ಷಿಸಿ:  ಸಿದ್ದರಾಮಯ್ಯ ಕನಸಿನ ಯೋಜನೆಯಲ್ಲೂ ಅಕ್ರಮ: ಗುತ್ತಿಗೆದಾರ,ಅಧಿಕಾರಿಗಳ ನಡುವೆ ಕಮಿಷನ್ ಫೈಟ್