ಸಿದ್ದರಾಮಯ್ಯ ಕನಸಿನ ಯೋಜನೆಯಲ್ಲೂ ಅಕ್ರಮ: ಗುತ್ತಿಗೆದಾರ,ಅಧಿಕಾರಿಗಳ ನಡುವೆ ಕಮಿಷನ್ ಫೈಟ್

ಬಡವರಿಗಾಗಿ ಜಾರಿಗೆ ತಂದ ಸಿಎಂ ಸಿದ್ದರಾಮಯ್ಯ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್. ಆದ್ರೆ ಈ ಯೋಜನೆಯಲ್ಲೂ ಈಗ ಕಮಿಷನ್ ವಾಸನೆ ಶುರುವಾಗಿದೆ. ಕಮಿಷನ್ ಗದ್ದಲ, ಅಸಮರ್ಪಕ ನಿರ್ವಹಣೆಯಿಂದಲೇ  ಇಂದಿರಾ ಕ್ಯಾಂಟೀನ್ ಯೋಜನೆ ಹಳ್ಳ ಹಿಡಿಯೋ ಲಕ್ಷಣ ಕಾಣ್ತಿದೆ.
 

First Published Oct 20, 2023, 10:02 AM IST | Last Updated Oct 20, 2023, 1:29 PM IST

ಸಿಎಂ ಸಿದ್ದರಾಮಯ್ಯ ಕನಸಿನ ಯೋಜನೆ  ಇಂದಿರಾ ಕ್ಯಾಂಟೀನ್ (Indira canteen). ಬಡವರಿಗೆ ಕಾರ್ಮಿಕರಿಗೆ ಕಡಿಮೆ ದುಡ್ಡಿನಲ್ಲಿ ಉತ್ತಮ ಆಹಾರ ನೀಡುವ ಯೋಜನೆ..ಆದ್ರೆ ಇದಕ್ಕೆ ಕಮಿಷನ್ ಭೂತ ಅಂಟಿಕೊಡಿದೆ. ಬಿಲ್ ಪಾಪತಿಸಲು ಅಧಿಕಾರಿಗಳು ಹಣ ಕೇಳ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾವೇರಿ (Haveri) ಹಿರೇಕೆರೂರು ಹಾಗೂ ರಾಣೆಬೆನ್ನೂರಿನ ಇಂದಿರಾ ಕ್ಯಾಂಟೀನ್ಗಳಿಗೆ ಒಂದು ವರ್ಷದ  35 ಲಕ್ಷ ರೂಪಾಯಿಗೂ ಅಧಿಕ ಬಿಲ್ ಬಾಕಿ ಇದೆ ಅಂತೆ. ಹಣ ಬಿಡುಗಡೆ ಮಾಡಿ ಅಂದ್ರೆ ಅಧಿಕಾರಿಗಳು ಕಮಿಷನ್ ಕೊಡಿ ಅಂತಾ ಕೇಳ್ತಾರೆ ಅಂತಾ ಗುತ್ತಿಗೆದಾರ ವಿಶ್ವನಾಥ್‌ರೆಡ್ಡಿ ದರ್ಶನಾಪುರ ಆರೋಪಿಸಿದ್ದಾರೆ. ಇನ್ನು ಇಂದಿರಾ ಕ್ಯಾಂಟೀನ್ ಕಮಿಷನ್(Commission)ಆರೋಪಕ್ಕೆ  ಡಿಸಿ ಸೇರಿದಂತೆ ಹಿರಿಯ ಅಧಿಕಾರಿಗಳು ಕಿಡಿ ಕಾರಿದ್ದಾರೆ. ಪ್ರತಿ ತಿಂಗಳು ಬಿಲ್ ಸಲ್ಲಿಸದೇ ಆರೇಳು ತಿಂಗಳ ಬಿಲ್ ಒಂದೇ ಸಲ ಕೊಟ್ಟಿದ್ದಾರೆ. ಕಾಂಟ್ರಾಕ್ಟರ್ ಸಲ್ಲಿಸಿದ ಬಿಲ್ನಲ್ಲಿ  ವ್ಯತ್ಯಾಸ ಕಂಡಿದ್ದಕ್ಕೆ ನೋಟಿಸ್ ಜಾರಿ ಮಾಡಲಾಗಿದೆ ಅಂತಾ ಡಿಸಿ ಹೇಳಿದ್ರೆ..ಕಮಿಷನ್ ಕೇಳಿದ್ದಕ್ಕೆ ದಾಖಲೆ ಇದ್ರೆ ಕೊಡಿ ಅಂತಾ ಯೋಜನಾ ನಿರ್ದೇಶಕಿ ಮಮತಾ ಗುತ್ತಿಗೆದಾರರ ವಿರುದ್ಧ ವಾಗ್ದಾಳಿ ನಡೆಸಿದ್ರು. ಸಿದ್ದರಾಮಯ್ಯರ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ ..ಹಸಿದವರ ಹೊಟ್ಟೆ ತುಂಬಿಸುವ ಮಹತ್ವಾಕಾಂಕ್ಷೆ ಯೋಜನೆ..ಆದ್ರೆ ಅಧಿಕಾರಿಗಳ,ಗುತ್ತಿಗೆದಾರರ ಜಟಾಪಟಿಯಿಂದ ಕ್ಯಾಂಟೀನ್‌ಗೆ ಶಾಶ್ವತವಾದಗಿ ಬೀಗ ಬೀಳೋ ಸಾಧ್ಯತೆ ಇದೆ. 

ಇದನ್ನೂ ವೀಕ್ಷಿಸಿ:  ಇಸ್ರೇಲ್ ವಿರುದ್ಧ ಒಂದಾದ 57 ಮುಸ್ಲಿಂ ರಾಷ್ಟ್ರಗಳು: ಯುದ್ಧ ನಿಲ್ಲಿಸಲೂ ಒಐಸಿ ಒಕ್ಕೂಟದಿಂದ ಎಚ್ಚರಿಕೆ!

Video Top Stories