Asianet Suvarna News Asianet Suvarna News

ನಾನು ದರ್ಶನ್ ಸೇಫ್ ಮಾಡ್ತಿದ್ದೇನೆ ಅನ್ನೋದು ಸುಳ್ಳು, ಭೇಟಿಯಾಗೇ 3 ತಿಂಗಳು ಆಗಿದೆ: ಸತೀಶ್‌ ರೆಡ್ಡಿ

ದರ್ಶನ್ ಕೇಸ್‌ನಲ್ಲಿ ನನ್ನನ್ನು ತಣುಕು ಹಾಕ್ತಿರೋದು ಸರಿಯಲ್ಲ. ತಪ್ಪು ಯಾರೇ ಮಾಡಿದ್ರು ಶಿಕ್ಷೆ ಆಗಬೇಕು ಎಂದು ಶಾಸಕ ಸತೀಶ್‌ ರೆಡ್ಡಿ ಹೇಳಿದ್ದಾರೆ.
 

ನಟ ದರ್ಶನ್‌ರನ್ನು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ(Renukaswamy murder case) ಬಚಾವ್‌  ಮಾಡಲು ಶಾಸಕ ಸತೀಶ್‌ ರೆಡ್ಡಿ(Satish Reddy) ಯತ್ನಿಸುತ್ತಿದ್ದಾರೆ ಎಂಬ ವದಂತಿ ಹರಿಡಿದೆ. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ದರ್ಶನ್(Darshan) ಸೇಫ್ ಮಾಡ್ತಿರೋದು ಸುಳ್ಳು. ದರ್ಶನ್ ಭೇಟಿಯಾಗಿ 3 ತಿಂಗಳು ಆಗಿದೆ ಎಂದು ಹೇಳಿದ್ದಾರೆ. ದರ್ಶನ್ ಕೇಸ್‌ನಲ್ಲಿ ನನ್ನನ್ನು ತಣುಕು ಹಾಕ್ತಿರೋದು ಸರಿಯಲ್ಲ. ತಪ್ಪು ಯಾರೇ ಮಾಡಿದ್ರು ಶಿಕ್ಷೆ ಆಗ್ಬೇಕು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ದೊರೆಯಬೇಕು ಎಂದು ಶಾಸಕ ಸತೀಶ್‌ ರೆಡ್ಡಿ ಹೇಳಿದ್ದಾರೆ. ನಾನು ಈ ವಿಚಾರವಾಗಿ ದರ್ಶನ್ ಪರ ನಿಲ್ಲಲ್ಲ. ದರ್ಶನ್ ತಪ್ಪು ಮಾಡಿದ್ದಾರಾ? ಇಲ್ವಾ ಅನ್ನೋದು ನ್ಯಾಯಾಲಯದ ಮೆಟ್ಟಿಲಲ್ಲಿದೆ. ಮುಂದೆ ನೋಡೋಣ ಎಂದರು. 

ಇದನ್ನೂ ವೀಕ್ಷಿಸಿ:  ದರ್ಶನ್ ಬಚಾವ್‌ಗೆ ಯತ್ನಿಸಿದವರಿಗೆ ತನಿಖೆಯ ಬಿಸಿ! ನಟನ ಜತೆ ಮಾತಾಡಿದವರ ಮನೆಗೆ ಪೊಲೀಸ್ ನೋಟಿಸ್!

Video Top Stories