ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ವಾಟ್ಸಪ್ ಮೆಸೇಜ್ ಬಗ್ಗೆ ಗೆಳೆಯರಿಗೇ ಅನುಮಾನ!
*ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ತನಿಖೆ ಚುರುಕ
*ಸಂತೋಷ್ ವಾಟ್ಸಪ್ ಮೇಸೆಜ್ ಬಗ್ಗೆ ಗೆಳೆಯರಿಗ ಅನುಮಾನ!
*ಪೊಲೀಸರಿಂದ ಹಳೆಯ ಮೇಸೆಜ್‌ಗಳ ಫಾರ್ಮ್ಯಾಟ್ ತನಿಖೆ
ಬೆಂಗಳೂರು (ಏ. 18): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಸಂಬಂಧ ಸಚಿವ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಕೊಂಡಿದೆ. ಈ ನಡುವೆ ಗುತ್ತಿಗೆದಾರ ಸಂತೋಷ ವಾಟ್ಸಾಪ್ ಮೇಸೆಜ್ ಬಗ್ಗೆ ಗೆಳಯರೇ ಅನುಮಾನ ವ್ಯಕ್ತಪಡಿಸಿದ್ದಾರೆ. " ಸಂತೋಷ್ ಹೆಚ್ಚಾಗಿ ಇಂಗ್ಲೀಷ್‌ನಲ್ಲಿ ಟೈಪ್ ಮಾಡುತ್ತಿದ್ದರು , ಆದರೆ ಅಂತಿಮವಾಗ ಕಳುಹಿಸಿದ ಮೇಸೆಜ್ ಕನ್ನಡದಲ್ಲಿತ್ತು" ಎಂದು ಗೆಳೆಯರು ಹೇಳಿದ್ದಾರೆ.
ಇದನ್ನೂ ನೋಡಿ: ಗುತ್ತಿಗೆದಾರ ಆತ್ಯಹತ್ಯೆ, ರಾಜೀನಾಮೆ ಹಿಂದಿನ ಷಡ್ಯಂತ್ರ ಏನು? ಈಶ್ವರಪ್ಪ ವಿಶೇಷ ಸಂದರ್ಶನ!
ಈ ಬೆನ್ನಲ್ಲೇ ಡೆತ್ ನೋಟ್ ಹಾಗೂ ಲಾಸ್ಟ್ ಮೇಸೆಜ್ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಳೆಯ ಮೇಸೆಜ್‌ಗಳ ಫಾರ್ಮ್ಯಾಟನ್ನು ಪೊಲೀಸರು ಪರೀಶಿಲಿಸುತ್ತಿದ್ದಾರೆ. ಇನ್ನು ಇತ್ತ ಶಿವಮೊಗ್ಗದಾದ್ಯಂತ ಮೃತ ಸಂತೋಷ ಪಾಟೀಲ್‌ಗೆ ಶ್ರದ್ಧಾಂಜಲಿ ಸಲ್ಲಿಸುವ ಫ್ಲೆಕ್ಸ್ ಹಾಕಲಾಗಿದೆ. ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ರಾತ್ರೋ ರಾತ್ರಿ 60ಕ್ಕೂ ಹೆಚ್ಚು ಕಡೆ ಪ್ರತ್ಯಕ್ಷವಾಗಿವೆ.