Asianet Suvarna News Asianet Suvarna News

ಧಾರವಾಡದಲ್ಲಿ ಕಾರ್ಮಿಕ ಇಲಾಖೆ ಐತಿಹಾಸಿಕ ಕಾರ್ಯಕ್ರಮ: 550 ತ್ರಿಚಕ್ರ ವಾಹನ ನೀಡಿದ ಸಚಿವ ಸಂತೋಷ್ ಲಾಡ್..!

ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಜೊತೆಗೆ ಕಾರ್ಮಿಕ ಇಲಾಖೆ ಐಸಿಹಾಸಿಕ ಕಾರ್ಯಕ್ರಮ ಮಾಡಿದೆ. ಒಂದೇ ವೇದಿಕೆಯಲ್ಲಿ ವಿಶೇಷ ಚೇತನರಿಗೆ 550 ತ್ರಿಚಕ್ರ ವಾಹನ ನೀಡೋ ಜೊತೆಗೆ ಅಸಂಘಟಿತ ಕಾರ್ಮಿಕರಿಗೆ ಜೀವವಿಮೆ ಘೋಷಣೆ ಮಾಡಲಾಯ್ತು. ಇದರ ಜೊತೆ ಸಂತೋಷ್ ಲಾಡ್ ಕಾರ್ಯ ವೈಖರಿಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಕಾರ್ಮಿಕರ ಏಳಿಗಾಗಿ ಪಣ ತೊಟ್ಟ ಸಚಿವ ಸಂತೋಷ್ ಲಾಡ್(Minister Santosh Lad) ಹಲವು ಯೋಜನೆಗಳ ಜಾರಿ ಮಾಡೋ ಮೂಲಕ ಜನಮೆಚ್ಚುಗೆ ಪಾತ್ರರಾಗಿದ್ದಾರೆ .ಇದರ ಜೊತೆ ವಿಶೇಷ ಚೇತನರ ಏಳಿಗೆಗೆ ಸಚಿವರು ಶ್ರಮಿಸುತ್ತಿದ್ದಾರೆ. ಧಾರವಾಡದಲ್ಲಿ(Dharwad) ಕಾರ್ಮಿಕ ಇಲಾಖೆ(Labour Department) ವತಿಯಿಂದ ಕೆಸಿಡಿ ಮೈದಾನದಲ್ಲಿ ಐತಿಹಾಸಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.ಸಿಎಂ ಸಿದ್ದರಾಮಯ್ಯ,ಸಚಿವ ಸಂತೋಷ್ ಲಾಡ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ರು. ಕಾರ್ಯಕ್ರಮದಲ್ಲಿ ವಿಶೇಷ ಚೇತನರಿಗೆ(Handicapped person) ಸಿಎಸ್‌ಆರ್ ಅನುದಾನದಡಿ 525 ತ್ರಿಚಕ್ರ ವಾಹನ ನೀಡಿದ್ರು. ಅಲ್ದೆ ಸಂತೋಷ್ ಲಾಡ್ ಫೌಂಡೇಶನ್‌ನಿದ 25 ವಾಹನಗಳನ್ನ ಸಿಎಂ ಸಿದ್ದರಾಮಯ್ಯ(Siddaramaiah) ವಿತರಣೆ ಮಾಡಿದ್ರು. ಅಲ್ದೆ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟ್ಯಾಪ್ ವಿತರಣೆ ಮಾಡಲಾಯ್ತು. ಇನ್ನು ಸ್ವಿಗ್ಗಿ,ಜೊಮ್ಯಾಟೋ ಸಂಸ್ಥೆಗಳಲ್ಲಿ ಫುಡ್‌ಡೆಲಿವರಿ ಮಾಡೋರಿಗೆ ಅಲ್ದೆ ಅಮೆಜಾನ್, ಪ್ಲಿಫ್‍ಕಾರ್ಟ್, ಬಿಗ್‍ಬಾಸ್ಕೆಟ್‌ನಲ್ಲಿ ಕೆಲಸ ಮಾಡೋ ಅಸಂಘಟಸಿತ ಕಾರ್ಮಿಕರಿಗೆ ಸರ್ಕಾರ 2 ಲಕ್ಷ ಅಪಘಾತ ವಿಮೆ ಹಾಗೂ 2 ಲಕ್ಷ ಜೀವವಿಮೆ ಘೋಷಿಸಿದ್ರು. ಇನ್ನು ತ್ರಿಚಕ್ರ ವಾಹನ ಪ್ರಾಯೋಜಿತ 126ಕ್ಕೂ ವಿವಿಧ ಕಂಪನಿಗಳು ಮುಖ್ಯಮಂತ್ರಿಗೆ ಗೌರವ ಸಮರ್ಪಿಸಿದ್ರು. ಗ್ಯಾರಂಟಿ ಯೋಜನೆ ಮೂಲಕ ಜನರ ಮನಸ್ಸು ಮುಟ್ಟುತ್ತಿದ್ದೇವೆ ಎಂದ ಸಚಿವ ಸಂತೋಷ್ ಲಾಡ್, ಕಾರ್ಮಿಕ ಇಲಾಖೆ ಬಡವರು, ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿದೆ. ಸಿಎಂ ಕನಸಿನ ಯೋಜನೆಗಳನ್ನು ಜನರಿಗೆ ತಲುಪಿಸಿದ್ದೇವೆ ಅಂದ್ರೆ, ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸಂತೋಷ್ ಲಾಡ್ ಉತ್ಸಾಹಿ ಸಚಿವರು. ಬಡ ಕಾರ್ಮಿಕರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡ ವ್ಯಕ್ತಿ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ರು. ಧಾರವಾಡದಲ್ಲಿ ನಡೆದ ಈ ಕಾರ್ಮಿಕ ಇಲಾಖೆ ಕಾರ್ಯಕ್ರಮ ರಾಜ್ಯದಲ್ಲಿ ಇತಿಹಾಸವನ್ನೆ ಸೃಷ್ಟಿ ಮಾಡಿದೆ. ಒಂದೇ ವೇದಿಕೆಯಲ್ಲಿ ಹಲವು ಯೋಜನೆ ಜನರಿಗೆ ನೀಡಿದೆ. ವಿಶೇಷ ಚೇತನರು ಸೇರಿ ಅಸಂಘಟಿತ ಕಾರ್ಮಿಕರಿಗೆ ಆಸರೆಯಾದ ಸಂತೋಷ್ ಲಾಡ್ ಕಾರ್ಯವೈಖರಿಗೆ ಸಿಎಂ ಶಹಬ್ಬಾಸ್ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  'ಕಾಂಗ್ರೆಸ್‌ಗಾಗಿ ಕಾಸು ಕೊಡಿ..' ಲೋಕಸಭೆ ಚುನಾವಣೆಗೆ ಜನರಿಂದ ಹಣವೆತ್ತಲು ಮುಂದಾದ ಕಾಂಗ್ರೆಸ್‌!

Video Top Stories