Asianet Suvarna News Asianet Suvarna News

ಅನ್ನದಾತರಿಗೆ ಕಂಟಕವಾಗಿವೆ ಕೆಮಿಕಲ್ ಫ್ಯಾಕ್ಟರಿ! ಕೆಮಿಕಲ್ ತ್ಯಾಜ್ಯದಿಂದ ರೈತರ ಬದುಕೇ ಬರ್ಬಾದ್

ಆ ಫ್ಯಾಕ್ಟರಿಯಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ಕೆಮಿಕಲ್ ಉತ್ಪಾದನೆ ಮಾಡುತ್ತಾರೆ. ರಾಯಚೂರಿನಲ್ಲಿ ಉತ್ಪಾದನೆ ಆಗುವ ಕೆಮಿಕಲ್ ದೇಶ-ವಿದೇಶಗಳಿಗೆ ಸರಭರಾಜು ಆಗುತ್ತೆ. ಆದ್ರೆ ಕೆಮಿಕಲ್ ಉತ್ಪಾದನೆ ಆಗುವ ವೇಳೆ ಸಂಗ್ರಹಣೆ ಆಗುವ ವೆಸ್ಟ್ ನೀರು ಈಗ ಬಡ ರೈತರ ಜಮೀನು ಸೇರುತ್ತಿದೆ. 
 

ಹೊಲ ಗದ್ದೆಗಳಲ್ಲಿ ಕೆಮಿಕಲ್ ನೀರು. ವಿಷ ಜಲ (poisonous water) ಸೇವಿಸಿ ಜೀವ ಬಿಟ್ಟ ಕುರಿಗಳು. ಕೆಮಿಕಲ್ ಪವರ್‌ಗೆ ಒಣಗಿ ನಿಂತ ಬೆಳೆ. ಆತಂಕದಲ್ಲಿ ಬದುಕುತ್ತಿರುವ ರೈತ ಕುಟುಂಬ. ಇದು ರಾಯಚೂರು(Raichur) ತಾಲೂಕಿನ ಬಹುತೇಕ ಗ್ರಾಮಗಳ ಪರಿಸ್ಥಿತಿ. ರಾಯಚೂರು ಹೊರವಲಯದ ವಡ್ಡೂರು ಗ್ರಾಮದ ಬಳಿ 30ಕ್ಕೂ ಹೆಚ್ಚು ಕೆಮಿಕಲ್ ಫ್ಯಾಕ್ಟರಿಗಳಿವೆ(Chemical factory). ನಿಯಮದ ಪ್ರಕಾರ, ಕಂಪನಿಗಳು ಕೆಮಿಕಲ್ ವೆಸ್ಟ್ ತ್ಯಾಜ್ಯವನ್ನು ಸಂಸ್ಕರಿಸಿ ಜನವಸತಿ ಪ್ರದೇಶದಿಂದ ದೂರದಲ್ಲಿ ವಿಲೇವಾರಿ ಮಾಡ್ಬೇಕು. ಆದ್ರಿಲ್ಲಿ ಟೆಂಡರ್ ಪಡೆದ ಗುತ್ತಿಗೆದಾರರು ಮನಬಂದಂತೆ ಕೆಮಿಕಲ್ ವೆಸ್ಟ್ ಡಂಪ್ ಮಾಡುತ್ತಿದ್ದಾರೆ. ರಾತ್ರೋ ರಾತ್ರಿ ರೈತರ(Farmer) ಜಮೀನು, ಪಾಳು ಬಿದ್ದ ಬಾವಿ ಹೀಗೆ ಸಿಕ್ಕ ಸಿಕ್ಕಲ್ಲಿ ಕಳ್ಳರಂತೆ ಬಂದು ವೇಸ್ಏಜ್ ಸುರಿಯುತ್ತಿದ್ದಾರೆ. ಏಗನೂರು ಗ್ರಾಮದಲ್ಲಿ ದೇವರಾಜ್ ಎಂಬುವರ ಜಮೀನಿನ ಬಳಿ ರಾತ್ರಿ ವೇಳೆ ಕೆಮಿಕಲ್ ಮಿಶ್ರಿತ ವಿಷಕಾರಿ ನೀರು ಸುರಿದು ಹೋಗಿದ್ದಾರೆ. ಈ ನೀರು ಸೇವಿಸಿದ ಕುರಿಗಳು ಸಾವಿಗೀಡಾಗಿವೆ. ಎಷ್ಟು ಡೇಂಜರ್ ಅಂದ್ರೆ ಒಂದು ಹಾವು ಕೂಡ ಸತ್ತುಬಿದ್ದಿದೆ. ವಿಷ ಜಂತುಗಳೇ ಕೆಮಿಕಲ್ ನೀರಿಗೆ ಬದುಕುಳಿಯುತ್ತಿಲ್ಲ. ಇನ್ನು ರೈತರ ಬೆಳೆಗಳು ಹೇಗೆ ಉಳಿಯೋಕೆ ಸಾಧ್ಯ. ತೊಗರಿ ಬೆಳೆ ಸಹ ಒಣಗಿ ನಿಂತಿವೆ. ರಾಯಚೂರು ಸುತ್ತಾಮುತ್ತಲಿನ ಹತ್ತಾರು ಹಳ್ಳಿಗಳಲ್ಲೂ ಇದೇ ಪರಿಸ್ಥಿತಿಯಿದೆ. ದೂರು ನೀಡಿದಾಗ ಹೆಸರಿಗೆ ಮಾತ್ರ ಪರಿಸರ ಇಲಾಖೆಯ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ ಸ್ಯಾಂಪಲ್ ಸಂಗ್ರಹಿಸಿಕೊಂಡು ಹೋಗ್ತಿದ್ದಾರೆ. ಕೆಮಿಕಲ್ ಫ್ಯಾಕ್ಟರಿಗಳ ವಿರುದ್ಧ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ರು. ಕೆಮಿಕಲ್ ಕಂಪನಿಗಳ ಈ ಕಳ್ಳಾಟ  ನಡೆಯುತ್ತಲೇ ಇದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಿಯಮ ಉಲ್ಲಂಘಿಸಿದ ಕಂಪನಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ, ಕಂಪನಿಗೆ ಬೀಗ ಜಡಿಯಬೇಕಾಗಿದೆ.

ಇದನ್ನೂ ವೀಕ್ಷಿಸಿ:  ಡ್ರಗ್ ಸ್ಮಗ್ಲಿಂಗ್ ಕಥೆಗೆ ಮಾಲೆಯಾಳಂ ಬ್ಯೂಟಿ ನಾಯಕಿ! ಡಿಸೆಂಬರ್‌ನಿಂದ ಶುರುವಾಗುತ್ತಾ ಯಶ್19 ಶೂಟಿಂಗ್ ?

Video Top Stories