Sainik Pod Electric Taxi: ಜನಸೇವೆಗೆ ಮುಂದಾಗಿರೋ ನಮ್ಮ ಹೆಮ್ಮೆಯ ಸೈನಿಕರು!

*ನಮ್ಮ ಮೆಟ್ರೋ ಪ್ರಯಾಣಿಕರ ಸೇವೆಗೆಂದು ನಿಂತಿದ್ದಾರೆ ಮಾಜಿ ಸೈನಿಕರ ತಂಡ
*ನಮ್ಮ ಮೆಟ್ರೋ ನಿಲ್ದಾಣಕ್ಕೆ ಕರೆದೊಯ್ಯಲು ಬಿಎಂಟಿಸಿ ಫೀಡರ್ ಬಸ್, ಆಟೋ ಸೇವೆ ಲಭ್ಯ
*ಇದೀಗ ಅದರ ಜೊತೆ ನಿಯೊ ಎಲೆಕ್ಟ್ರಿಕ್ ಕಾರು "ಸೈನಿಕ್ ಪೊಡ್" ಎಂಬ  ಸೇವೆ ಶುರು

First Published Feb 5, 2022, 3:40 PM IST | Last Updated Feb 5, 2022, 3:40 PM IST

ಬೆಂಗಳೂರು (ಜ. 05): ಇದು ನಮ್ಮ ಹೆಮ್ಮೆಯ ಸೈನಿಕರು (Soldier) ಜನಸೇವೆಗೆ ಮುಂದಾಗಿರೋ ಸ್ಟೋರಿ.  ನಮ್ಮ ಮೆಟ್ರೋ ಪ್ರಯಾಣಿಕರ ಸೇವೆಗೆಂದು ನಿಂತಿದ್ದಾರೆ ಮಾಜಿ ಸೈನಿಕರ ತಂಡ ಈಗ ಸಜ್ಜಾಗಿದೆ. ನಮ್ಮ ಮೆಟ್ರೋ ನಿಲ್ದಾಣಕ್ಕೆ ಕರೆದೊಯ್ಯಲು ಬಿಎಂಟಿಸಿ ಫೀಡರ್ ಬಸ್, ಆಟೋ ಸೇವೆ ಲಭ್ಯವಿದೆ. ಇದೀಗ ಅದರ ಜೊತೆ ನಿಯೊ ಎಲೆಕ್ಟ್ರಿಕ್ ಕಾರು "ಸೈನಿಕ್ ಪೊಡ್" ಎಂಬ  ಸೇವೆ ಶುರುವಾಗಿದೆ. ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಸೈನಿಕರು ಈ ಸೇವೆ ನೀಡುತ್ತಿದ್ದಾರೆ. 

ಇದನ್ನೂ ಓದಿ: ಪ್ರಯಾಣಿಕರನ್ನು ಬೇರೆಡೆಗೆ ಕರೆದೊಯ್ಯುವುದಕ್ಕೆ 'ಸೈನಿಕ್ ಪೋಡ್' ಆರಂಭಿಸಿದ Namma Metro

ಮುಖ್ಯವಾಗಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಬ್ರೇಕ್ ಹಾಕಲು ಮಾಜಿ ಸೈನಿಕರ ಸೇವೆ ನೀಡಲಿದ್ದಾರೆ. ನಿಯೋ ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ 160 ಕಿ.ಮೀ ಸಂಚರಿಸುತ್ತೆ. ಮೊದಲ ಕಿ.ಮೀ 30 ರೂಪಾಯಿಯಂತೆ ನಂತರದ ಪ್ರತಿ ಕಿ.ಮೀ 15 ರೂ ಚಾರ್ಜ್ ಮಾಡಲಾಗುವುದು. ಪ್ರಸ್ತುತ  ಮೈಸೂರು ರೋಡ್ ಮೆಟ್ರೋ ನಿಲ್ದಾಣದಲ್ಲಿ 12 ಸೈನಿಕ್ ಪೊಡ್ ಎಲೆಕ್ಟ್ರಿಕ್ ಕಾರ್‌ ಕಾರ್ಯಾಚರಣೆ ಆರಂಭವಾಗಿದೆ. 

Video Top Stories