ಪ್ರಯಾಣಿಕರನ್ನು ಬೇರೆಡೆಗೆ ಕರೆದೊಯ್ಯುವುದಕ್ಕೆ 'ಸೈನಿಕ್ ಪೋಡ್' ಆರಂಭಿಸಿದ Namma Metro
ನಮ್ಮ ಮೆಟ್ರೋ ನಿಲ್ದಾಣದಿಂದ ಬೇರೆಡೆಗೆ ಕರೆದೊಯ್ಯುವುದಕ್ಕೆ ಬಿಎಂಟಿಸಿ, ಆಟೋ ಸೇವೆ ಲಭ್ಯ ಇದೆ. ಇದೀಗ ಅದರ ಜೊತೆಗೆ 'ಸೈನಿಕ್ ಪೋಡ್' ಎಂಬ ಹೆಸರಿನ ನಿಯೋ ಎಲೆಕ್ಟ್ರಿಕ್ ಕಾರು ಕೂಡಾ ಪ್ರಯಾಣಿಕರ ಸೇವೆಗೆ ಸಜ್ಜಾಗಿದೆ.
ಬೆಂಗಳೂರು (ಫೆ.04): ನಮ್ಮ ಮೆಟ್ರೋ (Namma Metro) ನಿಲ್ದಾಣದಿಂದ ಬೇರೆಡೆಗೆ ಕರೆದೊಯ್ಯುವುದಕ್ಕೆ ಬಿಎಂಟಿಸಿ, ಆಟೋ ಸೇವೆ ಲಭ್ಯ ಇದೆ. ಇದೀಗ ಅದರ ಜೊತೆಗೆ 'ಸೈನಿಕ್ ಪೋಡ್' (Sainik Pod) ಎಂಬ ಹೆಸರಿನ ನಿಯೋ ಎಲೆಕ್ಟ್ರಿಕ್ ಕಾರು ಕೂಡಾ ಪ್ರಯಾಣಿಕರ ಸೇವೆಗೆ ಸಜ್ಜಾಗಿದೆ. ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣದಿಂದ ಈಗಾಗಲೇ 12 ಸೈನಿಕ್ ಪೋಡ್ ಹೆಸರಿನ ಕಾರುಗಳು ಕಾರ್ಯಾಚರಣೆಯನ್ನು ಶುರು ಮಾಡಿಕೊಂಡಿವೆ. ಈ ಎಲೆಕ್ಟ್ರಿಕ್ ಕಾರುಗಳಲ್ಲಿ ನಿವೃತ್ತ ಸೈನಿಕರು (Retiered Soldiers) ಕಾರ್ಯ ನಿರ್ವಹಿಸುತ್ತಿರುವುದು ವಿಶೇಷವಾಗಿದೆ.
Fire Accident: 3 ಬೈಕ್, 4 ಕಾರುಗಳು ಬೆಂಕಿಗಾಹುತಿ, ಅಕ್ಕಪಕ್ಕದ ಮನೆಗಳಿಗೂ ಹಾನಿ
ಮುಖ್ಯವಾಗಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಬ್ರೇಕ್ ಹಾಕುವ ಸಲುವಾಗಿ ನಿವೃತ್ತ ಸೈನಿಕರು ಈ ಸೇವೆಯಲ್ಲಿ ತೊಡಗಿದ್ದು, ಪ್ರಯಾಣಿಕರಿಂದಲೂ ಕೂಡಾ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಕಾರಿನ ಮೊದಲ ಪ್ರಯಾಣ ಕಿಲೋಮೀಟರ್‌ಗೆ 30 ರೂಪಾಯಿಯಾಗಿದ್ದು, ನಂತರದ ಪ್ರತಿ ಕಿಲೋಮೀಟರ್‌ಗೆ 15 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ. ಸದ್ಯ 12 ಸೈನಿಕ್ ಪೋಡ್ ಹೆಸರಿನ ಕಾರುಗಳು ಕಾರ್ಯಾಚರಣೆಯನ್ನು ಶುರುಮಾಡಿವೆ.