ಇನೋವಾ ಕಾರಲ್ಲಿ ಬಂದವ್ರು ATM ಮಷೀನ್ ಮುರಿದು ಹಣ ದೋಚಿದ್ರು..!

ಎಟಿಎಂ ಮಷೀನ್ ಮುರಿದು ಹಣ ದೋಚಿ ಪರಾರಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದಲ್ಲಿರುವ ಇಂಡಿಯಾ ವನ್ ಎಟಿಎಂನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ.

Share this Video
  • FB
  • Linkdin
  • Whatsapp

ಕೋಲಾರ(ಜ.15): ಎಟಿಎಂ ಮಷೀನ್ ಮುರಿದು ಹಣ ದೋಚಿ ಪರಾರಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಮುಖಕ್ಕೆ ಮಾಸ್ಕ್ ಧರಿಸಿದ್ದ ನಾಲ್ಕು ಜನ ಖದೀಮರ ತಂಡ ಕೃತ್ಯ ನಡೆಸಿದೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದಲ್ಲಿರುವ ಇಂಡಿಯಾ ವನ್ ಎಟಿಎಂನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗ್ಯಾಸ್ ಕಟ್ಟರ್ ಬಳಸಿ ಎಂಟಿಎಂ ಮಷೀನ್ ಮುರಿದು ಕೃತ್ಯ ನಡೆಸಲಾಗಿದೆ. ಇನೋವಾ ಕಾರಿನಲ್ಲಿ ಬಂದಿದ್ದ ನಾಲ್ಕು ಜನ ಖದೀಮರ ತಂಡ ಮನೆಯ ಮಾಲೀಕ ಪ್ರದೀಪ್ ಕೂಗಿಕೊಳ್ಳುತ್ತಿದಂತ್ತೆ ಹಣ ದೋಚಿ ಪರಾರಿಯಾಗಿದ್ದಾರೆ.

ಮಗುವಿಗೆ ಹೊಡೀಬೇಡ ಎಂದಿದ್ದಕ್ಕೆ ತಾಯಿ ಆತ್ಮಹತ್ಯೆ..!

ಎಂಟಿಎಂ ನಲ್ಲಿ ಎಷ್ಟು ಹಣ ಇತ್ತೆಂದು ಇನ್ನು ತಿಳಿದುಬಂದಿಲ್ಲ. ಸ್ಥಳಕ್ಕೆ ಆಂಡರ್ಸನ್ ಠಾಣೆಯ ಪೊಲೀಸರು ಭೇಟಿ ನೀಡಿ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆಂಡರ್ಸನ್ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

Related Video