ಅನ್ನಭಾಗ್ಯ ಯೋಜನೆ ಜಾರಿ: ಸರ್ಕಾರದ ನೆರವಿಗೆ ಮುಂದಾದ ಅಕ್ಕಿ ಗಿರಣಿ ಮಾಲೀಕರು!

ರಾಜ್ಯ ಸರ್ಕಾರದ ನೆರವಿಗೆ ಅಕ್ಕಿ ಗಿರಣಿ ಮಾಲೀಕರು ಮುಂದಾಗಿದ್ದು, ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷರಾದ ಸಾವಿತ್ರಿ ಪುರುಷೋತ್ತಮ್‌ ಹೇಳಿದ್ದಾರೆ. 
 

First Published Jul 2, 2023, 10:12 AM IST | Last Updated Jul 2, 2023, 10:12 AM IST

ರಾಯಚೂರು: ಜುಲೈ ಒಂದರಿಂದ ಅನ್ನಭಾಗ್ಯ ಯೋಜನೆ ಜಾರಿಯಾದ ಹಿನ್ನೆಲೆ ಸರ್ಕಾರದ ನೆರವಿಗೆ ಅಕ್ಕಿ ಗಿರಣಿ ಮಾಲೀಕರು ಮುಂದಾಗಿದ್ದಾರೆ. ಸರ್ಕಾರ ಹೊರ ರಾಜ್ಯಗಳಿಂದ ಭತ್ತವನ್ನು ಖರೀದಿಸಲಿ, ನಾವು ನಮ್ಮ ಮಿಲ್‌ಗಳಲ್ಲಿ ಅಕ್ಕಿಯನ್ನು ಮಾಡಿ ಕೊಡುತ್ತೇವೆ ಎಂದು ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷರಾದ ಸಾವಿತ್ರಿ ಪುರುಷೋತ್ತಮ್‌ ಹೇಳಿದ್ದಾರೆ. ನಮ್ಮಲ್ಲಿ ಇಡೀ ರಾಜ್ಯಕ್ಕೆ ಬೇಕಾಗುವಷ್ಟು ಅಕ್ಕಿ ಬೆಳೆಯುವುದಿಲ್ಲ. ನಾವು ಸರ್ಕಾರಕ್ಕೆ ಸಹಾಯ ಮಾಡಲು ಸಿದ್ದವಿದ್ದೇವೆ. ಈ ವಿಷಯವಾಗಿ ಸರ್ಕಾರ ನಮ್ಮ ಜೊತೆ ಮಾತುಕತೆ ನಡೆಸಿದ್ರೆ, ನಾವು ಸಹಾಯಕ್ಕೆ ಸಿದ್ಧರಿದ್ದೇವೆ ಎಂದು ಅಕ್ಕಿ ಗಿರಣಿ ಮಾಲೀಕರು ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ಕರುನಾಡಿನಲ್ಲಿ ಗೃಹಜ್ಯೋತಿ ಯೋಜನೆ ಜಾರಿ: ಈ ಬಗ್ಗೆ ಬೆಸ್ಕಾಂ ಎಂಡಿ ಮಹಾಂತೇಶ್‌ ಬೀಳಗಿ ಹೇಳಿದ್ದೇನು ?

Video Top Stories