Asianet Suvarna News Asianet Suvarna News

ಕರುನಾಡಿನಲ್ಲಿ ಗೃಹಜ್ಯೋತಿ ಯೋಜನೆ ಜಾರಿ: ಈ ಬಗ್ಗೆ ಬೆಸ್ಕಾಂ ಎಂಡಿ ಮಹಾಂತೇಶ್‌ ಬೀಳಗಿ ಹೇಳಿದ್ದೇನು ?

ಗೃಹಜ್ಯೋತಿ ಯೋಜನೆಗೆ ಇಲ್ಲಿತನಕ 89 ಲಕ್ಷ ಜನ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ್‌ ಬೀಳಗಿ ಹೇಳಿದ್ದಾರೆ.
 

ಬೆಂಗಳೂರು: ಗೃಹಜ್ಯೋತಿ ಯೋಜನೆ ಜುಲೈ 1ರಿಂದ ಜಾರಿಯಾಗಿದೆ. ಇಲ್ಲಿತನಕ ಸುಮಾರು 89 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದವರಿಗೆ ಮಾತ್ರ ಉಚಿತ ವಿದ್ಯುತ್‌ ಸಿಗಲಿದೆ. ಅಲ್ಲದೇ ಇದಕ್ಕೆ ಕೊನೆ ದಿನಾಂಕ ಇರುವುದಿಲ್ಲ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಬೆಸ್ಕಾಂ ಎಂಡಿ ಮಹಾಂತೇಶ್‌ ಬೀಳಗೆ ಹೇಳಿದ್ದಾರೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದುವರೆದಿದ್ದು, ಎಲ್ಲಾ ಸರ್ವರ್‌ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಅರ್ಜಿ ಸಲ್ಲಿಸಿದವರಲ್ಲಿ 200 ಯೂನಿಟ್‌ ಒಳಗೆ ಬಳಕೆ ಮಾಡುವವರು ಮಾತ್ರ ಇದರ ಫಲಾನುಭವಿಗಳು ಆಗಬಹುದು.ಒಟ್ಟು 2 ಕೋಟಿಗೂ ಅಧಿಕ ಜನ ಫಲಾನುಭವಿಗಳಿದ್ದಾರೆ ಎಂದು ಮಹಾಂತೇಶ್‌ ಬೀಳಗೆ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಬಿಜೆಪಿ ಅವಧಿಯಲ್ಲಿ ಪರಿಷ್ಕೃತವಾದ ಪಠ್ಯಕ್ಕೆ ಕೊಕ್‌: 6-10ನೇ ತರಗತಿ ಪಠ್ಯಗಳಲ್ಲಿ ತಿದ್ದುಪಡಿ, ಏನೇನು ಬದಲಾವಣೆ ಆಗಿದೆ ?

Video Top Stories