ದರ್ಶನ್‌ನನ್ನ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲು ಕಾರಣವೇನು..? ಬಾಯಿ ಬಿಡಬೇಕಿದೆ 40 ಲಕ್ಷದ ಸೀಕ್ರೆಟ್ !

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಕಾಣದ ಕೈಗಳು..!
ದರ್ಶನ್ ಬಾಯಿ ಬಿಡಬೇಕಿದೆ 40 ಲಕ್ಷದ ಸೀಕ್ರೆಟ್..!
ಕೇಸ್‌ನಲ್ಲಿ ಭಾಗಿಯಾಗಿರುವ ಕಾಣದ ಕೈ ಯಾರದ್ದು..?

Share this Video
  • FB
  • Linkdin
  • Whatsapp

ಅಮಾಯಕ ಯುವಕನೊಬ್ಬನ ಹೆಣ ಹಾಕಿದ್ದ ದರ್ಶನ್(Darshan) ಆ್ಯಂಡ್ ಗ್ಯಾಂಗ್ ಇವತ್ತು ಸೇರಬಾರದ ಜಾಗ ಸೇರಿದ್ದಾರೆ. 13 ಮಂದಿ ಜೈಲಲ್ಲಿ ಮುದ್ದೆ ಮುರಿಯುತ್ತಿದ್ರೆ ಇನ್ನೂ ಬಾಸ್ ಮತ್ತು ಆತನ ಮೂವರು ಸಹಚರರು ಸ್ಟೇಷನ್ ಲಾಕಪ್‌ನಲ್ಲಿ ಮೊಸರನ್ನ ತಿನ್ನುತ್ತಿದ್ದಾರೆ. ಆದ್ರೆ ಈ ನಾಲ್ಕು ಆರೋಪಿಗಳನ್ನ ಪೊಲೀಸರು(Police) ಮತ್ತೆ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದೇಕೆ ಅನ್ನೋದೇ ಇಂಟರೆಸ್ಟಿಂಗ್. ಈ ನಾಲ್ಕು ಆರೋಪಿಗಳು ಮತ್ತಷ್ಟು ಜನರ ಹೆಸರುಗಳನ್ನ ಹೇಳಬೇಕಿದೆ. ಈ ಕೇಸ್‌ನಲ್ಲಿ ಕೇವಲ 17 ಮಂದಿಯಷ್ಟೇ ಅಲ್ಲ. ಇನ್ನೂ ಕೆಲ ಕಾಣದ ಕೈಗಳು ಆಟವಾಡಿವೆ. ಕೇಸ್‌ನ(Renukaswamy murder case) ಆಳಕ್ಕೆ ಇಳಿದಂತೆಲ್ಲಾ ಕೃತ್ಯದ ಕ್ರೂರತೆ ಹೆಚ್ಚಾಗುತ್ತಿದೆ. ದರ್ಶನ್ ಮತ್ತು ಪಟಾಲಂನ ಒಂದೊಂದೇ ಶಾಕಿಂಗ್ ಸುದ್ದಿಗಳು ಹೊರಬರ್ತಿವೆ. ಆದ್ರೆ ಎಲ್ಲರ ಪಾಲಿಗೆ ಹೀರೋ ಆದ ದರ್ಶನ್ ಒಬ್ಬ ಬಡಪಾಯಿಯನ್ನ ಕೊಂದು ನಂತರ ತಾನೊಬ್ಬ ಸೇಫಾದ್ರೆ ಸಾಕು ಅಂತ ಲಕ್ಷ ಲಕ್ಷ ಹಣ ಸುರಿಯೋದಕ್ಕೆ ರೆಡಿ ಇರುವ ಈತ ನಿಜಕ್ಕೂ ವಿಲನ್ನೇ. ಇಂಥಹ ವಿಲನ್‌ಗಳನ್ನ ವಹಿಸಿಕೊಂಡು ಕೆಲ ರಾಜಕಾರಣಿಗಳು ಬಂದಿದ್ದಾರೆ. ಸಾಕಷ್ಟು ಮಾಹಿತಿಗಳನ್ನ ಇನ್ನೂ ಕಲೆಹಾಕಬೇಕಿದೆ ಅಂತ ದರ್ಶನ್ ಮತ್ತು ಮೂವರು ಆರೋಪಿಗಳನ್ನ ಪೊಲೀಸರು ಮತ್ತೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. 

ಇದನ್ನೂ ವೀಕ್ಷಿಸಿ: ನಾನು ದರ್ಶನ್ ಸೇಫ್ ಮಾಡ್ತಿದ್ದೇನೆ ಅನ್ನೋದು ಸುಳ್ಳು, ಭೇಟಿಯಾಗೇ 3 ತಿಂಗಳು ಆಗಿದೆ: ಸತೀಶ್‌ ರೆಡ್ಡಿ

Related Video