ಮಲೆ ಮಹದೇಶ್ವರ ಹುಂಡಿಯಲ್ಲಿ ದಾಖಲೆ ಸಂಗ್ರಹ; ಹರಿದು ಬಂತು ಕೋಟಿ ಕೋಟಿ ಹಣ!

ಪ್ರತಿ ತಿಂಗಳಿಗೊಮ್ಮೆ ನಡೆಯುವ ಹುಂಡಿ ಎಣಿಕೆ ಕಾರ್ಯ ಇದಾಗಿದ್ದು,  ದಾಖಲೆ ಪ್ರಮಾಣದಲ್ಲಿ ಹಣ ಮತ್ತು ಒಡವೆ ಸಂಗ್ರಹ; ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಎಪ್ಪತ್ತೇಳು ಮಲೆಗಳ ಒಡೆಯ ಮಲೆ ಮಹದೇಶ್ವರ ದೇವಾಲಯ

First Published Jan 30, 2020, 5:20 PM IST | Last Updated Jan 30, 2020, 5:20 PM IST

ಚಾಮರಾಜನಗರ (j.30): ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಎಪ್ಪತ್ತೇಳು ಮಲೆಗಳ ಒಡೆಯ ಮಲೆ ಮಹದೇಶ್ವರ ದೇವಾಲಯದಲ್ಲಿ ಮಂಗಳವಾರ ಹುಂಡಿ ತೆರೆದು ಎಣಿಕೆ ಕಾರ್ಯ ನಡೆಸಲಾಯಿತು.

ಇದನ್ನೂ ಓದಿ | ಮೂರು ತಿಂಗಳಲ್ಲಿ ದೇವರ ಹುಂಡಿಗೆ ಹರಿದು ಬಂತು ಲಕ್ಷ ಲಕ್ಷ ಕಾಣಿಕೆ..!...

ಪ್ರತಿ ತಿಂಗಳಿಗೊಮ್ಮೆ ನಡೆಯುವ ಹುಂಡಿ ಎಣಿಕೆ ಕಾರ್ಯ ಇದಾಗಿದ್ದು,  ದಾಖಲೆ ಪ್ರಮಾಣದಲ್ಲಿ ಹಣ ಮತ್ತು ಒಡವೆ ಸಂಗ್ರಹವಾಗಿದೆ.  ಕಳೆದ ಒಂದು ತಿಂಗಳ ಅವಧಿಯಲ್ಲಿ 1 ಕೋಟಿ 71 ಲಕ್ಷದ  458 ರುಪಾಯಿ ನಗದು ಸಂಗ್ರಹವಾಗಿದೆ.

ಅಲ್ಲದೇ 22 ಗ್ರಾಂ ಚಿನ್ನ 1 ಕೆಜಿ 400 ಗ್ರಾಂ ಬೆಳ್ಳಿ ವಸ್ತುಗಳು ಕೂಡಾ ಹುಂಡಿಯಲ್ಲಿ ಜಮೆಯಾಗಿವೆ.