ರಾಯಚೂರು: ತುಂಬಿ ಹರಿಯುತ್ತಿರುವ ಕೃಷ್ಣೆ , ತೆಪ್ಪದಲ್ಲಿ ಜೀವದ ಹಂಗು ತೊರೆದು ಸಂಚಾರ..!

ತಮ್ಮ ಜೀವವನ್ನೇ ಪಣಕ್ಕಿಟ್ಟು ಜೀವನ ನಡೆಸುತ್ತಿರುವ ಜನರು| ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಕರಗರಗಡ್ಡಿ ಗ್ರಾಮದಲ್ಲಿ ನಡೆದ ಘಟನೆ| ಕೃಷ್ಣಾ ನದಿಯಲ್ಲಿ ಭೀಕರ ಪ್ರವಾಹ|

First Published Aug 9, 2020, 2:38 PM IST | Last Updated Aug 9, 2020, 2:38 PM IST

ರಾಯಚೂರು(ಆ.09): ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಜೀವನ ನಡೆಸುತ್ತಿರುವ  ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಕರಗರಗಡ್ಡಿ ಗ್ರಾಮದಲ್ಲಿ ನಡೆದಿದೆ. ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಪರಿಣಾಮ ಮಳೆಯಿಂದ ಕೃಷ್ಣಾ ನದಿಯಲ್ಲಿ ಭೀಕರ ಪ್ರವಾಹ ಎದುರಾಗಿದೆ. 

ಯಾದಗಿರಿ: ಭಾರೀ ಪ್ರವಾಹ, 5 ದಿನದಿಂದ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ..!

ಸದ್ಯ ನದಿಯಲ್ಲಿ 2 ಲಕ್ಷ ಕ್ಯೂಸೆಕ್ಸ್‌ ನೀರು ಹರಿಬಿಡಲಾಗಿದೆ. ಇಂತಹ ಭೀಕರ ಸನ್ನಿವೇಶದಲ್ಲಿ ಕರಗರಗಡ್ಡಿ ಹಾಗೂ ಗೋನವಾಟ್ಲಾ ನಡುವೆ ಸಂಚರಿಬೇಕಾದರೆ ನದಿಯಲ್ಲಿ ತೆಪ್ಪದ ಮೂಲಕವೇ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.