ಯಾದಗಿರಿ: ಭಾರೀ ಪ್ರವಾಹ, 5 ದಿನದಿಂದ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ..!

ಕಳೆದ ಐದು ದಿನಗಳಿಂದ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ| ಯಾದಗಿರಿ ಜಿಲ್ಲೆಯ ನಾರಾಯಣಪುರ ಬಳಿ ನಡೆದ ಘಟನೆ| ಸುಮಾರು 200 ಕುರಿಗಳ ಸಹಿತ ನಡೆಗಡ್ಡೆಯಲ್ಲಿ ಸಿಲುಕಿರುವ ಕುರಿಗಾಹಿ|

First Published Aug 9, 2020, 1:02 PM IST | Last Updated Aug 9, 2020, 1:02 PM IST

ಯಾದಗಿರಿ(ಆ.09):  ಭಾರೀ ಮಳೆಯಿಂದ ಪ್ರವಾಹ ಬಂದೊದಗಿದ್ದರಿಂದ ಕುರಿಗಾಹಿಯೊಬ್ಬ ಕಳೆದ ಐದು ದಿನಗಳಿಂದ ನಡುಗಡ್ಡೆಯಲ್ಲಿ ಸಿಲುಕಿದ ಘಟನೆ ಜಿಲ್ಲೆಯ ನಾರಾಯಣಪುರ ಬಳಿ ನಡೆದಿದೆ. ಸುಮಾರು 200 ಕುರಿಗಳ ಸಹಿತ ನಡೆಗಡ್ಡೆಯಲ್ಲಿ ಸಿಲುಕಿರುವ ತೋಪಣ್ಣ ಎಂಬುವರು ಸಹಾಯಕ್ಕಾಗಿ ಅಂಗಲಾಚಿಸಿದ್ದಾರೆ. 

ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸು ರಕ್ಷಣೆ

ಕಳೆದ ದಿನಗಳಿಂದ ತೋಪಣ್ಣ ನಡೆಗಡ್ಡೆಯಲ್ಲಿ ಸಿಲುಕಿದ್ದಾರೆ. ಹೀಗಾಗಿ ತೋಪಣ್ಣ ಅವರನ್ನ ರಕ್ಷಿಸಿಲು ಹರಸಾಹಸ ಪಡಲಾಗುತ್ತಿದೆ. ರಕ್ಷಣಾ ಕಾರ್ಯಕ್ಕೆ ಪ್ರವಾಹ ಅಡ್ಡಿಯಾಗುತ್ತಿದೆ. ಹೀಗಾಗಿ ತೋಪಣ್ಣನ್ನ ಹೇಗೆ ರಕ್ಷಣೆ ಮಾಡೋದು ಎಂಬುದೇ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.