Asianet Suvarna News Asianet Suvarna News

News Hour: ಬಗೆದಷ್ಟು ಬಯಲಾಗುತ್ತಿದೆ ಬೆಂಗಳೂರು ಉಗ್ರಜಾಲ!

ಬೆಂಗಳೂರಿನ ಉಗ್ರಜಾಲ ಬಗೆದಷ್ಟು ಬಯಲಾಗುತ್ತಿದೆ. ಈ ನಡುವೆ ಬಿಜೆಪಿ ಇಂದು ಕಾಂಗ್ರೆಸ್‌ ಪಕ್ಷಕ್ಕೆ ಉಗ್ರ ನಂಟಿರುವ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದು, ಭೈರತಿ ಸುರೇಶ್‌ ವಿರುದ್ಧ ಆಕ್ರೋಶ ಹೊರಹಾಕಿದೆ.
 

ಬೆಂಗಳೂರು (ಜು..21): ಬೆಂಗಳೂರು ಉಗ್ರಜಾಲ ಬಗೆದಷ್ಟು ಬಯಲಾಗುತ್ತಿದೆ. ರಾಜ್ಯ ರಾಜಧಾನಿಯಲ್ಲಿ ರಕ್ತದ ಕೋಡಿ ಹರಿಸಲು ಭಾರಿ ಸ್ಕೆಚ್‌ ಹಾಕಿಕೊಂಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಬ್ಲಾಸ್ಟ್‌ಗಳ ಮೂಲಕ ಇಡೀ ಬೆಂಗಳೂರನ್ನು ನಡುಗಿಸಲು ಸಂಚು ರೂಪಿಸಿದ್ದರು.

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಉಗ್ರರ ನೇಮಕಾತಿ ಕೇಂದ್ರ ಆಗ್ತಿದ್ಯಾ ಎನ್ನುವ ಅನುಮಾನ ಕಾಡಿದೆ. ದುಡ್ಡು ಕೊಟ್ಟರೆ ಉಗ್ರರಿಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ವ್ಯವಸ್ಥೆ ಸಿಗುತ್ತದೆ. 2008ರ ಸರಣಿ ಬಾಂಬ್‌ ಬ್ಲಾಸ್ಟ್‌ ಆರೋಪಿಗೆ ನೀಡಿರುವ ರಾಜಾತಿಥ್ಯವನ್ನು ನೋಡಿದರೆ, ಇದು ಸಾಬೀತಾಗುತ್ತದೆ.ಇನ್ನೊಂದೆಡೆ ರಾಜಕೀಯ ವಿಚಾರದಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಮೈತ್ರಿ ಆಗಿಯೇಹೋಗಿದೆ ಎನ್ನುವಷ್ಟು ಜೊತೆಯಾಗಿ ಕೆಲಸ ಮಾಡುತ್ತಿದೆ. ಇಂದು ವಿಧಾನಸೌಧದ ಜೆಡಿಎಸ್‌ ಕಚೇರಿಯಲ್ಲಿ ಮಾಜಿ ಸಿಎಂಗಳಾದ ಎಚ್‌ಡಿ ಕುಮಾರಸ್ವಾಮಿ ಹಾಗೂ ಬಸವರಾಜ್‌ ಬೊಮ್ಮಾಯಿ ಜೊತೆಯಾಗಿದ್ದರು.

Video Top Stories