ರಾಯಚೂರಿನಲ್ಲಿ ಬೆಳೆಗೆ ನೀರಿಲ್ಲದೆ ಹಾಹಾಕಾರ: ಒಣಗಿ ನಿಂತ ಭತ್ತದ ಬೆಳೆ

ಕಾಲುವೆಗೆ ನೀರು ‌ಇಲ್ಲದಕ್ಕೆ ಒಣಗಿ ‌ನಿಂತಿವೆ ಭತ್ತದ ಗದ್ದೆಗಳು
ನೂರಾರು ಎಕರೆ ಪ್ರದೇಶದಲ್ಲಿ ಒಣಗಿ ಹೋಗಿದ ಭತ್ತದ ಬೆಳೆ
ಭತ್ತ ಒಣಗಿ ಹೋಗಿ ನೀರು ಇಲ್ಲದಕ್ಕೆ ಬಿರುಕು ಬಿಟ್ಟ ಭೂಮಿ

First Published Oct 27, 2023, 10:54 AM IST | Last Updated Oct 27, 2023, 10:56 AM IST

ರಾಯಚೂರಿನಲ್ಲಿ ತುಂಗಭದ್ರಾ(Tungabhadra) ಎಡದಂಡೆ ಕಾಲುವೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕಾಲುವೆಗೆ ನೀರು ಬರದೇ ಇರುವುದರಿಂದ ರೈತರು ಕಂಗಾಲು ಹೋಗಿದ್ದಾರೆ. ರಾಯಚೂರು, ಮಾನ್ವಿ ಮತ್ತು ಸಿರವಾರ ಭಾಗದ ರೈತರು(Farmers) ಅತ್ತ ಮಳೆಯೂ ಇಲ್ಲ, ಇತ್ತ ಕಾಲುವೆಯ ನೀರು ನಿಲ್ಲದೆ ಅನ್ನದಾತರು ಪರದಾಟ ನಡೆಸಿದ್ದಾರೆ. ತುಂಗಭದ್ರಾ ಕಾಲುವೆ ನೀರು ನಂಬಿ ಭತ್ತ(Rice) ನಾಟಿ ಮಾಡಿದ ರೈತರಿಗೆ ಈಗ ಭಾರೀ ಶಾಕ್ ಆಗಿದೆ.ಕಾಲುವೆಗೆ ನೀರು ‌ಇಲ್ಲದಕ್ಕೆ ಭತ್ತದ ಗದ್ದೆಗಳು ಒಣಗಿ ನಿಂತಿವೆ. ನೂರಾರು ಎಕರೆ ಪ್ರದೇಶದಲ್ಲಿ ಒಣಗಿ ಹೋಗಿದ ಭತ್ತವೂ ಒಣಗಿ ಹೋಗಿ ನೀರು ಇಲ್ಲದಕ್ಕೆ ಭೂಮಿ ಸಹ ಬಿರುಕು ಬಿಟ್ಟಿದೆ. ಇನ್ನೂ  ಎಕರೆಗೆ 30-35 ಸಾವಿರ ರೂ. ಖರ್ಚು ಮಾಡಿದ ರೈತರಿಗೆ ದಿಕ್ಕೆ ಕಾಣದಂತೆ ಆಗಿದೆ‌.

ಇದನ್ನೂ ವೀಕ್ಷಿಸಿ:  ಕೈ ಕೊಟ್ಟ ಮುಂಗಾರು, ಗಗನಕ್ಕೇರಿದ ಅಕ್ಕಿ ರೇಟು: ಕೂಲಿ ಮಾಡಿ ಜೀವನ ಸಾಗಿಸೋರ ಕತೆ ಏನು..?

Video Top Stories