Milk price hike: ರಾಜ್ಯದಲ್ಲಿ ಇನ್ಮುಂದೆ ಅಭಿವೃದ್ಧಿ ಇಲ್ಲ, ಕೇವಲ ಬೆಲೆ ಏರಿಕೆ ಮಾತ್ರ- ಸರ್ಕಾರದ ವಿರುದ್ಧ ಆರ್‌.ಅಶೋಕ್‌ ಕಿಡಿ

ದರ ಏರಿಕೆ ಖಂಡಿಸಿ ಸಿಎಂ ಮನೆಗೆ ಮುತ್ತಿಗೆ ಹಾಕ್ತೀವಿ. ಹಾಲಿನ ದರವನ್ನು ಎರಡು ರೂಪಾಯಿ ಜಾಸ್ತಿ ಮಾಡಿ, ರಾಜ್ಯದ ಜನರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

Share this Video
  • FB
  • Linkdin
  • Whatsapp

ಹಾಲಿನ ದರ ಏರಿಕೆಗೆ(Milk price hike) ವಿರೋಧ ಪಕ್ಷದ ನಾಯಕ ಆರ್.ಅಶೋಕ್(R Ashok) ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸರ್ಕಾರ ಮನ ಬಂದಂತೆ ಬೆಲೆ ಏರಿಕೆ ಮಾಡ್ತಿದೆ. ಹಾಲಿನ ದರ 2 ರೂ. ಹೆಚ್ಚಳ ಮಾಡಿದೆ. ರಾಜ್ಯ ಸರ್ಕಾರಕ್ಕೆ ಜನರ ಶಾಪ ತಟ್ಟುತ್ತದೆ. ದರ ಏರಿಕೆ ಖಂಡಿಸಿ ಸಿಎಂ(Siddaramaiah) ಮನೆಗೆ ಮುತ್ತಿಗೆ ಹಾಕ್ತೀವಿ. ವಿಧಾನಸಭೆಯಿಂದ ಸಿಎಂ ಮನೆಗೆ ಮುತ್ತಿಗೆ ಹಾಕ್ತೀವಿ ಎಂದು ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಡಬಲ್‌ ಡಿಜಿಟ್‌ ಬಂದ ಕೋಪಕ್ಕೆ ಮನಬಂದಂತೆ ದರ ಏರಿಕೆ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ್ರೆ ಎಲ್ಲ ದರ ಇಳಿಸುತ್ತೇವೆ ಎಂದಿದ್ದರು. ಸಿಎಂ ಸಿದ್ದರಾಮಯ್ಯ ಅವರೇ ನಿಮಗೆ ಎಷ್ಟು ನಾಲಿಗೆ ಇದೆ ಎಂದು ಆರ್‌. ಅಶೋಕ್‌ ಕಿಡಿಕಾರಿದ್ದಾರೆ.

ಇದನ್ನೂ ವೀಕ್ಷಿಸಿ: ದರ್ಶನ್‌ಗೆ ‘164’ ಕಂಟಕ..! ಕೊಲೆ ಪ್ರಕರಣದಲ್ಲಿ 180 ಸಾಕ್ಷ್ಯ ಸಂಗ್ರಹಿಸಿರುವ ಪೊಲೀಸರು !

Related Video