ದರ್ಶನ್‌ಗೆ ‘164’ ಕಂಟಕ..! ಕೊಲೆ ಪ್ರಕರಣದಲ್ಲಿ 180 ಸಾಕ್ಷ್ಯ ಸಂಗ್ರಹಿಸಿರುವ ಪೊಲೀಸರು !

ಕೊಲೆ ಪ್ರಕರಣದಲ್ಲಿ 180 ಸಾಕ್ಷ್ಯ ಸಂಗ್ರಹಿಸಿರುವ ಪೊಲೀಸರು 
ಪಟ್ಟಣಗೆರೆ ಶೆಡ್ ಸೆಕ್ಯುರಿಟಿ ಸೇರಿ 8 ಮಂದಿ ಪ್ರತ್ಯಕ್ಷ ದರ್ಶಿಗಳು
ಈಗಾಗಲೇ ಸೆಕ್ಯುರಿಟಿ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು

First Published Jun 25, 2024, 1:17 PM IST | Last Updated Jun 25, 2024, 1:17 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ(Renukaswamy murder case) ಸಂಬಂಧಿಸಿದಂತೆ ಪೊಲೀಸರು (Police) 180 ಸಾಕ್ಷ್ಯಗಳನ್ನು(Evidence) ಸಂಗ್ರಹಿಸಿದ್ದಾರೆ. ಸ್ಥಳ ಮಹಜರು ನಡೆಸಿ ಪ್ರತಿ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕೊಲೆಯಾದ ಸ್ಥಳದಲ್ಲಿದ್ದ ಪ್ರತಿಯೊಂದು ವಸ್ತುಗಳನ್ನು ಸೀಜ್ ಮಾಡಲಾಗಿದೆ. ಪಟ್ಟಣಗೆರೆ ಶೆಡ್ ಸೆಕ್ಯುರಿಟಿ ಸೇರಿ 8 ಮಂದಿ ಪ್ರತ್ಯಕ್ಷದರ್ಶಿಗ ಹೇಳಿಕೆಯನ್ನು ಈಗಾಗಲೇ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಧರಿಸಿದ್ದ ಬಟ್ಟೆ, ಶೂ, ಚಪ್ಪಲಿ, ವಾಹನಗಳನ್ನು ಸೀಜ್ ಮಾಡಲಾಗಿದೆ. ದರ್ಶನ್ ಧರಿಸಿದ್ದ ಬೆಲ್ಟ್ ಸೀಜ್ ಮಾಡಿರುವ ಪೊಲೀಸರು. ಜಡ್ಜ್ ಮುಂದೆ CRPC 164 ಹೇಳಿಕೆ ದಾಖಲಿಸಿರುವ ಖಾಕಿ. ಇನ್ನು ಉಳಿದ 7 ಮಂದಿಯ ಹೇಳಿಕೆ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಿಆರ್‌ಪಿಸಿ 164 ಅಡಿಯಲ್ಲಿ ಹೇಳಿಕೆ ದಾಖಲಿಸಲು ತಯಾರಿ ನಡೆಸಲಾಗುತ್ತಿದೆ.

ಇದನ್ನೂ ವೀಕ್ಷಿಸಿ:  Suraj Revanna sexual abuse case: ಸೂರಜ್ ರೇವಣ್ಣ ಕಸ್ಟಡಿಗೆ ಪಡೆಯಲು ಕೋರ್ಟ್‌ಗೆ CID ನೀಡಿದ ಕಾರಣಗಳೇನು..?