ಎಲ್ಲಾ ಬೆಲೆ ಜಾಸ್ತಿ ಮಾಡುವ ಮೂಲಕ ರಾಜ್ಯ ಸರ್ಕಾರ ದರೋಡೆ ಮಾಡಲು ಹೊರಟಿದೆ: ಆರ್‌. ಅಶೋಕ್‌

ವರ್ಷಕ್ಕೆ 3 ರಿಂದ 4 ಕೋಟಿ ಟ್ಯಾಕ್ಸ್ ಕಲೆಕ್ಟ್ ಮಾಡುವ ದೃಷ್ಟಿಯಿಂದ ಪೆಟ್ರೋಲ್ 3ರೂ. ಡಿಸೇಲ್ 3.50 ರೂ. ಜಾಸ್ತಿ ಮಾಡಿದ್ದಾರೆ ಎಂದು ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

First Published Jun 16, 2024, 4:04 PM IST | Last Updated Jun 16, 2024, 4:09 PM IST

ಕಾಂಗ್ರೆಸ್ ಅಧಿಕಾರಕ್ಕೆ (Congress government) ಬಂದ ಮೇಲೆ ಬೆಲೆ ಏರಿಕೆ ಜಾಸ್ತಿಯಾಗಿದೆ. ಒಂದು ವರ್ಷದ ಅವಧಿಯಲ್ಲಿ ಎಲ್ಲಾ ರೀತಿಯ ಭಾಗ್ಯ ಕೊಟ್ಟಿದ್ದಾರೆ. ಕರ್ನಾಟಕದ ಜನತೆ ಮೇಲೆ ದೌರ್ಜನ್ಯ ಮಾಡ್ತಿದ್ದಾರೆ ಎಂದು ಅಶೋಕ್(R Ashok) ಕಿಡಿಕಾರಿದ್ದಾರೆ. ಹಾಲಿನ ಬೆಲೆ, ಆಲ್ಕೋಹಾಲ್ ಬೆಲೆ , ಸ್ಟಾಂಪ್ ಡ್ಯೂಟಿ ಜಾಸ್ತಿ ಮಾಡಿದ್ರು. ಎಲೆಕ್ರಿಟ್ ತೆರಿಗೆ, ಮನೆ ತೆರಿಗೆ ಜಾಸ್ತಿ ಮಾಡಿದ್ರು. ಕೊನೆಯದಾಗಿ ಪೆಟ್ರೋಲ್, ಡಿಸೇಲ್ ಬೆಲೆ(Petrol diesel price) ಏರಿಸಿದ್ದಾರೆ. ವರ್ಷಕ್ಕೆ 3 ರಿಂದ 4 ಕೋಟಿ ಟ್ಯಾಕ್ಸ್ ಕಲೆಕ್ಟ್ ಮಾಡುವ ದೃಷ್ಟಿಯಿಂದ ಪೆಟ್ರೋಲ್ 3ರೂ. ಡಿಸೇಲ್ 3.50 ರೂ. ಜಾಸ್ತಿ ಮಾಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ದರೋಡೆ ಮಾಡಲು ಹೊರಟಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಜನರಿಗೆ ಅನ್ಯಾಯವಾಗುತ್ತೆ ಅಂತಾ ನಿವೇ ಹೇಳಿದ್ದೀರಾ. ಸಿದ್ದರಾಮಯ್ಯನವರೇ ನಿಮಗೆ ಮಾನ, ಮರ್ಯಾದೆ ಇದೆಯಾ? 15 ಬಾರಿ ಬಜೆಟ್ ಮಂಡಿಸಿದ್ದು ಯಾವ ಪುರುಷಾರ್ಥಕ್ಕೆ..? ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಪ್ರಶ್ನಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಇದು ಜನವಿರೋಧಿ, ಸತ್ತು ಹೋಗಿರೋ ಸರ್ಕಾರ, ಜನರೇ ದಫನ್ ಮಾಡೋ ದಿನ ಬರುತ್ತೆ: ಸಿಟಿ ರವಿ