ಕೇಂದ್ರ ಸಚಿವರು ಬಂದರೆ ಪರಿಹಾರ ಸಿಗಲ್ಲ ಅಂತೀರಾ? ನೀವಾದ್ರೂ ಬರ್ತೀರಾ?: ಡಿಕೆಶಿ ವಿರುದ್ಧ ಅಶೋಕ್ ಕಿಡಿ

ಮೊದಲು ಡಿಕೆಶಿ ಮನೆಬಿಟ್ಟು ಹೊರಗಡೆ ಬರಲಿ. ಡಿಕೆಶಿ ಬಂದರೆ ಪ್ರಯೋಜನ ಆಗುತ್ತೆ ಅಂದರೆ ಬರಲಿ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ(HD Kumaraswamy) ಮಳೆಹಾನಿ ವೀಕ್ಷಣೆಯಿಂದ ಪ್ರಯೋಜನವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿಕೆಗೆ ಆರ್.ಅಶೋಕ್ (R Ashok) ತಿರುಗೇಟು ನೀಡಿದ್ದಾರೆ. ಡಿಕೆಶಿ ಬಂದರೆ ಪ್ರಯೋಜನ ಆಗುತ್ತೆ ಅಂದರೆ ಬರಲಿ. ಮೊದಲು ಡಿಕೆಶಿ ಮನೆಬಿಟ್ಟು ಹೊರಗಡೆ ಬರಲಿ. ಕೇಂದ್ರ ಸಚಿವರು ಬಂದರೆ ಪರಿಹಾರ ಸಿಗಲ್ಲ ಅಂತೀರಾ..? ನೀವಾದ್ರೂ ಬರ್ತೀರಾ..? ನಿಮಗೆ ಬರುವ ಯೋಗ್ಯತೆ ಇಲ್ಲ ಎಂದು ಹೇಳಿದರು. ರಾಜ್ಯ ಸರ್ಕಾರ ಕೊಡ್ತಿರೋದು NDRF ಹಣ, ಸರ್ಕಾರ ಸತ್ತು ಹೋಗಿದೆ, ಬದುಕಿದ್ದರೆ ತಾನೇ ಕೇಳೋದು. ರಾಜ್ಯ ಸರ್ಕಾರ ಬದುಕಿದೆ ಅಂತ ಮೊದಲು ತೋರಿಸಲಿ ಎಂದು ಹಾಸನದಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ಸ್ಫೋಟಕ ದಾಖಲೆಯೊಂದಿಗೆ ಮತ್ತೊಂದು ಹಗರಣ ಬಯಲು: ನಾಗೇಂದ್ರ, ದದ್ದಲ್ ಆಯ್ತು? ಮುಂದೆ ಯಾರು ಅಂತೀರಾ?

Related Video