ಸ್ಫೋಟಕ ದಾಖಲೆಯೊಂದಿಗೆ ಮತ್ತೊಂದು ಹಗರಣ ಬಯಲು: ನಾಗೇಂದ್ರ, ದದ್ದಲ್ ಆಯ್ತು? ಮುಂದೆ ಯಾರು ಅಂತೀರಾ?
ಎಂಎಲ್ಎ ರಕ್ಷಣೆಗೆ ನಿಂತೀದಿಯಾ ಸಿದ್ದರಾಮಯ್ಯ ಸರ್ಕಾರ..?
ತನಿಖೆಗೆ ಗ್ರೀನ್ ಸಿಗ್ನಲ್ ಕೊಟ್ರೆ ಅರೆಸ್ಟ್ ಆಗ್ತಾರಾ ಎಂಎಲ್ಎ..?
ನಾಲ್ಕು ತಿಂಗಳಾದರೂ ಅನುಮತಿ ಕೊಡದ ರಾಜ್ಯ ಸರ್ಕಾರ..?
ಕಾಂಗ್ರೆಸ್ ಸರ್ಕಾರದ (Congress government) ಮತ್ತೊಬ್ಬ ಶಾಸಕರೊಬ್ಬರ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಸ್ಪೋಟಕ ದಾಖಲೆಗಳೊಂದಿಗೆ ಸುದ್ದಿ ಬ್ರೇಕ್ ಮಾಡಲಾಗಿದೆ. ಕೋಮುಲ್ ಸಂಸ್ಥೆಯಲ್ಲಿ(Komul hiring scam) ನಡೆದ ಅತಿದೊಡ್ಡ ಭ್ರಷ್ಟಚಾರ ಇದಾಗಿದೆ. ಮಾಲೂರು ಶಾಸಕ ಕೆ.ವೈ. ನಂಜೇಗೌಡರ (KY Nanjegowda) ಮೇಲಿದೆ ಗಂಭೀರ ಆರೋಪ ಕೇಳಿಬಂದಿದೆ. 75 ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ನಡೆದಿದೆ ಬಿಗ್ ಗೋಲ್ ಮಾಲ್ ನಡೆದಿದೆ. ಕೋಟಿ ಕೋಟಿ ಹಣ ಪಡೆದು ಅನರ್ಹರಿಗೆ ನೇಮಕಾತಿ ಕೊಟ್ಟ ಆರೋಪ ಕೇಳಿಬಂದಿದೆ. ಕೇಂದ್ರದ ತನಿಖಾ ಸಂಸ್ಥೆಗಳೇ ಬಯಲು ಪ್ರಕರಣವನ್ನು ಮಾಡಿವೆ. ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ದಾಳಿ ಮಾಡಿದ್ದ ಇಡಿ, ಶಾಸಕ ನಂಜೇಗೌಡ ಸೇರಿ ಹಲವರ ನಿವಾಸದ ಮೇಲೆ ದಾಳಿ ಮಾಡಿದೆ. ಇಡಿ ದಾಳಿ ವೇಳೆ ಕೋಮುಲ್ ನೇಮಕಾತಿಯ ಹಗರಣ ಪತ್ತೆಯಾಗಿದ್ದು, ಅನರ್ಹರ ನೇಮಕಾತಿ ಬಗ್ಗೆ ಸ್ಪಷ್ಟ ದಾಖಲೆಗಳು ಇಡಿಗೆ ಲಭ್ಯವಾಗಿವೆ. ನೇಮಕಾತಿ ಹಗರಣದಲ್ಲಿ ಹಲವರು ಹಣ ಪಡೆದ ಬಗ್ಗೆ ಮಾಹಿತಿ ಇದೆ. ದಾಳಿಯಲ್ಲಿ ಪತ್ತೆಯಾದ ಅಂಶಗಳನ್ನ ಲೋಕಾಯುಕ್ತ ಗಮನಕ್ಕೆ ಇಡಿ ತಂದಿದೆ. ಲೋಕಾಯುಕ್ತ ಮಹಾನಿರ್ದೇಶಕರಿಗೆ ಇಡಿ ಅಧಿಕಾರಿಗಳು ಪತ್ರ ಬರೆದಿದ್ದು, ಮಾರ್ಚ್ 3- 2024 ರಂದು ಲೋಕಾಯುಕ್ತ(Lokayukta) ಸಂಸ್ಥೆಗೆ ಪತ್ರ ಬರೆಯಲಾಗಿದೆ. ಇಡಿ ವರದಿ ಆಧರಿಸಿ ತನಿಖೆ ಮಾಡಲು ರಾಜ್ಯ ಸರ್ಕಾರದ ನಿರ್ದೇಶನವನ್ನು ಲೋಕಾಯುಕ್ತ ಸಂಸ್ಥೆ ಕೋರಿದೆ. ಭ್ರಷ್ಟಚಾರ ನಿಯಂತ್ರಣ ಕಾಯ್ದೆಯಡಿ ಎಫ್ಎಆರ್ ದಾಖಲಿಸಿಕೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಶಾಸಕರು ಸೇರಿ ಸರ್ಕಾರಿ ಅಧಿಕಾರಿಗಳ ಭಾಗಿ ಹಿನ್ನೆಲೆ ತನಿಖೆಯ ಅನುಮತಿಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಇದನ್ನೂ ವೀಕ್ಷಿಸಿ: ದರ್ಶನ್‌ಗೆ ಮುಳುವಾಗುತ್ತಾ ಮತ್ತೊಂದು ಸಾಕ್ಷಿ? ಶವ ಬಿಸಾಕಿದ ಬಳಿಕ ಸ್ನೇಹಿತನ ಬಳಿ ಕಥೆ ಹೇಳಿದ್ದ ಆರೋಪಿ!