ಅಬ್ಬಾಬ್ಬ..! ಹೆಬ್ಬಾವನ್ನೇ ಬೇಟೆಯಾಡಿದ ಕಾಳಿಂಗ: ಭಯಾನಕ ವಿಡಿಯೋ

ಸುಮಾರು 16 ಅಡಿ ಉದ್ದದ ಕಾಳಿಂಗ ಸರ್ಪ 8 ಅಡಿ ಉದ್ದದ ಹೆಬ್ಬಾವನ್ನು ಭೇಟಿಯಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಟ್ಟು ಗ್ರಾಮದಲ್ಲಿ ನಡೆದಿದೆ.

Share this Video
  • FB
  • Linkdin
  • Whatsapp

ಮಂಗಳೂರು: ಭಾರೀ ಗಾತ್ರದ ಹೆಬ್ಬಾವೊಂದನ್ನು ಕಾಳಿಂಗ ಸರ್ಪ ಬೇಟೆಯಾಡಿದ ಘಟನೆ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಟ್ಟು ಗ್ರಾಮದಲ್ಲಿ‌ ನಡೆದಿದೆ. ಸ್ನೇಕ್‌ ಅಶೋಕ್‌ ಅವರು ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ. ಕಲ್ಲಾಜೆ ಪ್ರಾಥಮಿಕ ಶಾಲೆಯ ಬಳಿಯ ನಿವಾಸಿ ಕೆ.ಬಾಲಕೃಷ್ಣ ಗೌಡ ಎಂಬುವರ ಮನೆಯ ಅಂಗಳದಲ್ಲಿ ಈ ದೃಶ್ಯ ಕಂಡು ಬಂದಿದೆ. 8 ಅಡಿ ಉದ್ದದ ಹೆಬ್ಬಾವನ್ನು(Python) ಸುಮಾರು 16 ಅಡಿ ಉದ್ದದ ಕಾಳಿಂಗ ಸರ್ಪ(Cobra) ಬೇಟೆಯಾಡಿದೆ. ಕೂಡಲೇ ಸ್ನೇಕ್ ಅಶೋಕ್ ಲಾಯಿಲ ಅವರನ್ನು ಕೆ. ಬಾಲಕೃಷ್ಣ ಗೌಡ ಕರೆಸಿ, ಸ್ಥಳಕ್ಕೆ ಬಂದ ಸ್ನೆಕ್ ಅಶೋಕ್ ಅವರಿಂದ ಕಾಳಿಂಗ ಸರ್ಪದ ಹಿಡಿತದಲ್ಲಿದ್ದ ಹೆಬ್ಬಾವಿನ ರಕ್ಷಣೆ ಮಾಡಲಾಗಿದೆ. ಕಾಳಿಂಗ ಸರ್ಪ ಮತ್ತು ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. 

ಇದನ್ನೂ ವೀಕ್ಷಿಸಿ: ಸಾಹಸಸಿಂಹನ ಸ್ಮಾರಕ ನಿರ್ಮಾಣಕ್ಕಾಗಿ ಕೂಗು..! ಸರ್ಕಾರಕ್ಕೆ ಗಡುವು ಕೊಟ್ಟ ಡಾ.ವಿಷ್ಣು ಸೇನಾ ಸಮಿತಿ..!

Related Video