ಸಾಹಸಸಿಂಹನ ಸ್ಮಾರಕ ನಿರ್ಮಾಣಕ್ಕಾಗಿ ಕೂಗು..! ಸರ್ಕಾರಕ್ಕೆ ಗಡುವು ಕೊಟ್ಟ ಡಾ.ವಿಷ್ಣು ಸೇನಾ ಸಮಿತಿ..!
ಅಂತ್ಯವಾಗುತ್ತಾ ಸಾಹಸಸಿಂಹನ ವನವಾಸ..?
ಸ್ಮಾರಕ ನಿರ್ಮಾಣಕ್ಕೆ ಸರ್ಕಾರದ ಮೇಲೆ ಒತ್ತಡ..!
ಸಾಗರೋಪಾದಿಯಲ್ಲಿ ಬಂದ ದಾದಾ ಫ್ಯಾನ್ಸ್..!
ಸಾಹಸ ಸಿಂಹ , ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅಂದ್ರೆ ಕನ್ನಡ ಸಿನಿ ರಂಗ ಇರುವ ತನಕ ಮರೆಯಲಾಗದ ಹೆಸರು. ಸ್ಯಾಂಡಲ್‌ವುಡ್(Sandalwood) ಕಂಡ ಮೇರು ನಟರಲ್ಲಿ ವಿಷ್ಣು ದಾದಾ ಕೂಡ ಒಬ್ಬರು. ಆದ್ರೆ ಒಂದಲ್ಲ ಎರಡಲ್ಲಾ, ಹದಿನಾಲ್ಕು ವರ್ಷಗಳಿಂದ ಕೂಡ ಅವರ ಅಂತ್ಯಕ್ರಿಯೆ ನಡೆದ ಜಾಗದಲ್ಲಿ ಸ್ಮಾರಕ ನಿರ್ಮಾಣ ಆಗಬೇಕೆಂದು ಹೋರಾಟ ನಡೀತಾನೆ ಇದೆ. ಇಂದು ಆ ಹೋರಾಟ ಇನ್ನೊಂದು ಹಂತವನ್ನ ತಲುಪಿದೆ. ಸಾಹಸಸಿಂಹ ವಿಷ್ಣುವರ್ಧನ್(Vishnuvardhan). ಕನ್ನಡ ಸಿನಿ ಜಗತ್ತಿನ ಆಸ್ತಿ. ಸಿನಿಪ್ರೇಮಿಗಳ ಆರಾಧ್ಯ ದೈವ. ಕನ್ನಡಿಗರು ಎಂದೂ ಮರೆಯದಂತ ಸಿನಿಮಾಗಳನ್ನ ಕೊಟ್ಟ ಅಭಿನಯ ಭಾರ್ಗವ. ವಿಷ್ಣುವರ್ಧನ್ ಅವರು ಸಿನಿ ದುನಿಯಾದಲ್ಲಿ ದೊಡ್ಡ ಹೆಸರನ್ನ ಮಾಡಿದವರು. 1950 ಸೆ.18 ರಂದು ಜನಿಸಿದ ವಿಷ್ಣುದಾದಾ 2009 ಡಿಸೆಂಬರ್ 30ರಂದು ಇಹಲೋಕ ತ್ಯಜಿಸ್ತಾರೆ. ವಿಷ್ಣುವರ್ಧನ್ ಅವರ ಪಾರ್ಥೀವ ಶರೀರವನ್ನ ಅಭಿಮಾನ್ ಸ್ಟುಡಿಯೋದಲ್ಲಿ(Abhiman Studio) ಅಂತ್ಯಕ್ರಿಯೆಯನ್ನೂ ಮಾಡಲಾಗುತ್ತೆ. ಅಭಿಮಾನ್ ಸ್ಟುಡಿಯೋ ಅಂದ್ರೆ ವಿಷ್ಣು ಅಭಿಮಾನಿಗಳಿಗೆ ಒಂದು ಭಾವನಾತ್ಮಕ ನಂಟು ಇರೋ ಜಾಗ. ಅಲ್ಲಿಯೇ ನೆಚ್ಚಿನ ನಟ ಪಂಚಭೂತಗಳಲ್ಲಿ ಲೀನವಾಗಿದ್ದು. ಹೀಗಾಗಿ ಅಂದಿನಿಂದಲೂ ಕೂಡ ಸ್ಮಾರಕ ನಿರ್ಮಾಣ ಆಗಬೇಕು ಅನ್ನೋ ಹೋರಾಟ ನಡೀತಾನೆ ಇದೆ. ಆ ಹೋರಾಟಕ್ಕೆ ಈಗ 14 ವರ್ಷದ ಪ್ರಾಯ. ಆದ್ರೆ ಫಲಿತಾಂಶ ಮಾತ್ರ ಶೂನ್ಯ ಅನ್ನೊದು ನೋವಿನ ವಿಚಾರವಾಗಿದೆ.
ಇದನ್ನೂ ವೀಕ್ಷಿಸಿ: ಕಂತೆ ಕಂತೆ ದುಡ್ಡೆಲ್ಲಾ ಯಾರ ಸ್ವತ್ತು..? ಹೇಗೆ ಬಂತು..? ಆ ದುಡ್ಡಿನ ಸಾಮ್ರಾಜ್ಯ ಕಟ್ಟಿದ್ದು ಹೇಗೆ ಧೀರಜ್ ಸಾಹು..?