Asianet Suvarna News Asianet Suvarna News

Mysuru: ಪುನೀತ್ ಪುಣ್ಮಸ್ಮರಣೆಗೆ ಹೋದ ಅಭಿಮಾನಿ ನಾಪತ್ತೆ, ಮಗನನ್ನು ಹುಡುಕಿಕೊಡಿ ಎಂದು ತಾಯಿ ಕಣ್ಣೀರು

 ಪುನೀತ್ (Puneeth Rajkumar) ಅಪ್ಪಟ ಅಭಿಮಾನಿ, ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಹೋದವನು ಮನೆಗೆ ವಾಪಸ್ ಬಂದಿಲ್ಲ. ಮಗನ ಸುಳಿವು ಕಾಣದೇ ಅಮ್ಮ ಕಣ್ಣೀರಿಡುತ್ತಿದ್ದಾರೆ. ಟೀ. ನರಸೀಪುರ (T Narasipura) ಕಾಲೇಜಿನಲ್ಲಿ ಎಂ.ಕಾಂ ವಿದ್ಯಾರ್ಥಿ ದರ್ಶನ್ ನಾಪತ್ತೆಯಾಗಿದ್ದಾನೆ. 

ಬೆಂಗಳೂರು (ನ. 30): ಕರುನಾಡ ಮನೆ ಮಗ,  ಕರುನಾಡಿನ ಯುವರಾಜ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ತಿಂಗಳಾಗುತ್ತಾ ಬಂದಿದೆ. ಆದರೂ ಈ ಆಘಾತದಿಂದ ಇನ್ನೂ ಹೊರ ಬರಲಾಗುತ್ತಿಲ್ಲ. ಅಪ್ಪು ನಮ್ಮೊಂದಿಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಂಠೀರವ ಸ್ಟುಡಿಯೋದಲ್ಲಿರುವ (Kanteerava studio) ಅಪ್ಪು ಸಮಾಧಿಗೆ ಅಭಿಮಾನಿಗಳು ಭೇಟಿ ನೀಡುತ್ತಲೇ ಇದ್ದಾರೆ. ನೆಚ್ಚಿನ ನಟನಿಗೆ ಬೇರೆ ಬೇರೆ ರೀತಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

Puneeth Rajkumar Social Work: ಶಕ್ತಿಧಾಮದ ಬಗ್ಗೆ ಕುಟುಂಬದ ನಿರ್ಧಾರವಿದು!

ಇಲ್ಲೊಬ್ಬ ಪುನೀತ್ ಅಪ್ಪಟ ಅಭಿಮಾನಿ, ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಹೋದವನು ಮನೆಗೆ ವಾಪಸ್ ಬಂದಿಲ್ಲ. ಮಗನ ಸುಳಿವು ಕಾಣದೇ ಅಮ್ಮ ಕಣ್ಣೀರಿಡುತ್ತಿದ್ದಾರೆ. ಟೀ. ನರಸೀಪುರ (T Narasipura) ಕಾಲೇಜಿನಲ್ಲಿ ಎಂ.ಕಾಂ ವಿದ್ಯಾರ್ಥಿ ದರ್ಶನ್ ನಾಪತ್ತೆಯಾಗಿದ್ದಾನೆ. ಪುನೀತ್ ಅಭಿಮಾನಿಗಳಿಗೆ ದರ್ಶನ್ ಸುಳಿವು ಸಿಕ್ಕರೆ, ಮನೆಗೆ ಕಳುಹಿಸುವಂತೆ ಅಮ್ಮ ಮನವಿ ಮಾಡಿದ್ದಾರೆ. 

 

Video Top Stories