Puneeth Rajkumar social work:ಶಕ್ತಿಧಾಮದ ಬಗ್ಗೆ ಕುಟುಂಬದ ನಿರ್ಧಾರವಿದು!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Power Star Puneeth Rajkumar) ಉಸಿರಲ್ಲಿ ಉಸಿರೆಂದು ತಮ್ಮ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಕಟ್ಟಿದ್ದ ಶಕ್ತಿಧಾಮವನ್ನು ಪರಿಗಣಿಸಿದ್ದರು. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 29): ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Power Star Puneeth Rajkumar) ಉಸಿರಲ್ಲಿ ಉಸಿರೆಂದು ತಮ್ಮ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಕಟ್ಟಿದ್ದ ಶಕ್ತಿಧಾಮವನ್ನು ಪರಿಗಣಿಸಿದ್ದರು. 

Ek Love Ya: ರಚಿತಾ ಹಾಟ್ ಆಗಿ ಕಾಣಿಸಿದ ಹಾಡುಗಳೆಲ್ಲಾ ಸೂಪರ್ ಹಿಟ್..!

ಮೈಸೂರಿನಲ್ಲಿರೋ ಈ ಶಕ್ತಿಧಾಮ ಇದುವರೆಗೂ ಸಾವಿರಾರು ಮಕ್ಕಳ ಆಶ್ರಯ ತಾಣವಾಗಿದೆ. ಪಾರ್ವತಮ್ಮ ಕಾಲಾ ನಂತರ ಈ ಶಕ್ತಿಧಾಮದ ಜವಾಬ್ಧಾರಿಯನ್ನ ದೊಡ್ಮನೆ ಕುಟುಂಬ ನೋಡಿಕೊಳ್ಳುತ್ತಿತ್ತು. ಅದರಲ್ಲೂ ಪವರ್ ಸ್ಟಾರ್ ಪುನೀತ್ ಈ ಶಕ್ತಿಧಾಮದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ಅಲ್ಲಿದ್ದ 150 ಮಕ್ಕಳ ಜವಾಬ್ಧಾರಿ ಅಪ್ಪು ಹೆಗಲ ಮೇಲಿತ್ತು. ಅಪ್ಪು ನಿಧನದ ಬಳಿಕ ಈಗ ನಟ ಶಿವರಾಜ್ ಕುಮಾರ್ (Shivarajkumar) ಹಾಗೂ ಗೀತಾ ಶಿವರಾಜ್ ಕುಮಾರ್ (Geetha Shivarajkumar) ಶಕ್ತಿಧಾಮಕ್ಕೆ ಭೇಟಿ ಕೊಟ್ಟು, ಶಕ್ತಿಧಾಮ (Shaktidhama) ಟ್ರಸ್ಟ್ ಜೊತೆ ಸಭೆ ನಡೆಸಿದ್ದಾರೆ. ಈ ಟ್ರಸ್ಟ್‌ಗೆ ಗೀತಾ ಶಿವರಾಜ್ ಕುಮಾರ್ ಅಧ್ಯಕ್ಷೆಯಾಗಿದ್ದಾರೆ. ಶಕ್ತಿಧಾಮದಲ್ಲಿರೋ 150 ಮಕ್ಕಳ ಆರೈಕೆ ಮತ್ತು ಅವರ ಶಿಕ್ಷಣದ ಬಗ್ಗೆ ಮಾತುಕಥೆ ಮಾಡಿದ್ದಾರೆ. 

Related Video