Asianet Suvarna News Asianet Suvarna News

ಬಿಗ್‌ 3 ಇಂಪ್ಯಾಕ್ಟ್‌: ಬಯಲು ಶೌಚಾಲಯ ಸಂಕಟಕ್ಕೆ ಮುಕ್ತಿ..!

ಸಾಮೂಹಿಕ ಶೌಚಾಲಯ ಬಗ್ಗೆ ಬಿಗ್‌ 3 ಕಾರ್ಯಕ್ರಮದಲ್ಲಿ ವರದಿ ಪ್ರಸಾರ| ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು| ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸುಜಾತಾ ಕಳ್ಳಿಮನಿ| 

First Published Jan 29, 2021, 1:05 PM IST | Last Updated Jan 29, 2021, 1:05 PM IST

ವಿಜಯಪುರ(ಜ.29):  ಸಾಮೂಹಿಕ ಶೌಚಾಲಯಕ್ಕೆ ಮುಕ್ತಿ ಸಿಕ್ಕ ಘಟನೆ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದಲ್ಲಿ ಎಲ್ಲರೂ ಸಾಮೂಹಿಕ ಶೌಚಾಲಯವನ್ನ ಬಳಸುತ್ತಿದ್ದರು. ಈ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌ 3 ಕಾರ್ಯಕ್ರಮದಲ್ಲಿ ವರದಿಯನ್ನ ಪ್ರಸಾರ ಮಾಡಲಾಗಿತ್ತು. 

ಶಶಿಕಲಾ ಗ್ರ್ಯಾಂಡ್ ಎಂಟ್ರಿ; ತಮಿಳುನಾಡು ರಾಜಕೀಯಕ್ಕೆ ಕಳೆ ಕಟ್ತಾರಾ, ಮೊಳೆ ಹೊಡೆಯುತ್ತಾರಾ..?

ಬಿಗ್‌ 3  ಕಾರ್ಯಕ್ರಮದಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿದ್ದಾರೆ. ಶೌಚಾಲಯಗಳ ಸುತ್ತ ಬೆಳೆದಿದ್ದ ಮುಳ್ಳು ಕಂಟಿಗಳ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಕೂಡ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.