PSI Recruitment Scam: ಮತ್ತೊಬ್ಬ ಆರೋಪಿ ಬಂಧನ, ಒಟ್ಟು ಬಂಧಿತರ ಸಂಖ್ಯೆ 12ಕ್ಕೆ ಏರಿಕೆ
*ಪಿಎಸ್‌ಐ ಪರೀಕ್ಷೆ ಅಕ್ರಮ: ಸಿಐಡಿ ತನಿಖೆ ಚುರುಕು
*ಮತ್ತೊಬ್ಬ ಆರೋಪಿ ಬಂಧನ, ಒಟ್ಟು ಬಂಧಿತರ ಸಂಖ್ಯೆ 12ಕ್ಕೆ
*ಮತ್ತಷ್ಟು ಪ್ರಭಾವಿಗಳು ತನಿಖಾ ದಳದ ಬಲೆಗೆ ಬೀಳುವ ಸಾಧ್ಯತೆ
ಬೆಂಗಳೂರು (ಏ. 22): ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದ ತನಿಖೆ ಚುರುಕುಗೊಳಿಸಿರುವ ಸಿಐಡಿ ಪೊಲೀಸರು, ಅಕ್ರಮದಲ್ಲಿ ಭಾಗಿಯಾದ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಇನ್ನು ಬ್ಲೂಟುತ್ ಮೂಲಕ ಪರೀಕ್ಷೆ ಬರೆದಿದ್ದ ಜಾಲ ಬಯಲಾಗಿದ್ದು ಜ್ಞಾನಜ್ಯೋತಿ ಕೇಂದ್ರದ ಮತ್ತೊಬ್ಬ ಅಭ್ಯರ್ಥಿಯನ್ನು ಪೊಲೀಸ್ ಬಂಧಿಸಿದ್ದಾರೆ. ಸಿಐಡಿ ಟೀಮ್ ಹಲವರ ಮೇಲೆ ಕಣ್ಣಿಟ್ಟಿದ್ದು ಮತ್ತಷ್ಟು ಪ್ರಭಾವಿಗಳು ತನಿಖಾ ದಳದ ಬಲೆಗೆ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: PSI Recruitment Scam: ಗನ್‌ಮ್ಯಾನ್ ಅಕ್ರಮಕ್ಕೂ ನನಗೂ ಸಂಬಂಧವಿಲ್ಲ: ಎಂ ವೈ ಪಾಟೀಲ್
ಇನ್ನು ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪ್ರಕರಣ ಸಂಬಂಧ ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಸಿಐಡಿ ವಿಚಾರಣೆ ಮುಂದುವರೆದಿದ್ದು, ಪ್ರತಿದಿನ 50 ಅಭ್ಯರ್ಥಿಗಳು ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುತ್ತಿದ್ದಾರೆ. ನೋಟಿಸ್ ಹಿನ್ನೆಲೆಯಲ್ಲಿ ನಗರದ ಅರಮನೆ ರಸ್ತೆಯಲ್ಲಿರುವ ಸಿಐಡಿ ಕೇಂದ್ರ ಕಚೇರಿಯಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಅಭ್ಯರ್ಥಿಗಳನ್ನು ದಾಖಲೆಗಳನ್ನು ಸಲ್ಲಿಸುತ್ತಿದ್ದಾರೆ. ಬೆಳಗ್ಗೆ 10.30 ರಿಂದ ಸಂಜೆ 6 ಗಂಟೆವೆರೆಗೆ ಒಬ್ಬೊಬ್ಬರಾಗಿ ಅಭ್ಯರ್ಥಿಗಳನ್ನು ಪ್ರಶ್ನಿಸಿ ಅಧಿಕಾರಿಗಳು ಹೇಳಿಕೆ ದಾಖಲಿಸಿದ್ದಾರೆ. ಇಂದು ಕೂಡಾ ಮತ್ತೊಂದು ತಂಡದ ಅಭ್ಯರ್ಥಿಗಳ ವಿಚಾರಣೆ ನಡೆಯಲಿದೆ.