PSI Recruitment Scam: ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಎಸ್ಕೇಪ್, ಪತಿ ಸಿಐಡಿ ಖೆಡ್ಡಾಗೆ!

ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪತಿ ರಾಜೇಶ್‌ರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
 

First Published Apr 18, 2022, 1:07 PM IST | Last Updated Apr 18, 2022, 1:35 PM IST

ಕಲಬುರಗಿ (ಏ. 18): ಈಶ್ವರಪ್ಪ ಪ್ರಕರಣದ ಬಳಿಕ, ರಾಜ್ಯ ಬಿಜೆಪಿಗೆ ಮುಜುಗರ ತರುವಂತಹ ಇನ್ನೊಂದು ಪ್ರಕರಣ ಈಗ  ಬೆಳಕಿಗೆ ಬಂದಿದೆ.  ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ (PSI Recruitment Scam) ಕಲಬುರಗಿಯ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ (Divya Hagaragi) ಶಾಮೀಲಾಗಿದ್ದಾರೆ ಎನ್ನಲಾಗಿದೆ. ಇನ್ನು ಈ ಬೆನ್ನಲ್ಲೇ ದಿವ್ಯಾ ಹಾಗರಗಿ ಪತಿ ರಾಜೇಶ್‌ರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: PSI ನೇಮಕಾತಿ ಹಗರಣ: ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಎಸ್ಕೇಪ್ ಆಗಿದ್ದು ಯಾಕೆ?

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ (PSI Exam Fraud Case) ಕಲಬುರಗಿಯ ಬಿಜೆಪಿ (BJP) ನಾಯಕಿ ದಿವ್ಯಾ ಹಾಗರಗಿ (Divya Hagaragi) ಶಾಮೀಲಾಗಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಸಿಐಡಿ ತಂಡ  ಕಲಬುರಗಿಯ (Kalaburagi) ದಿವ್ಯಾ ಹಾಗರಗಿ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದೆ. ಆದರೆ ದಾಳಿ ವೇಳೆ ದಿವ್ಯಾ ಹಾಗರಗಿ ಮನೆಯಲ್ಲಿ ಇರಲಿಲ್ಲ ಅಲ್ಲದೇ ಕಳೆದ ನಾಲ್ಕು ದಿನಗಳಿಂದ ಅವರ ಮೊಬೈಲ್‌ ಸ್ವೀಚ್‌ ಆಫ್‌ ಆಗಿದೆ. ಇನ್ನು ದಾಳಿ ವೇಳಿ ಸಿಐಡಿ ಮಹತ್ವದ ದಾಖಲೆ ವಶಪಡಿಸಿಕೊಂಡಿದೆ.