Rambhapuri Sri: ರಂಭಾಪುರಿ ಶ್ರೀಗಳ ವಿರುದ್ಧ ಮಠದ ಭಕ್ತರಿಂದ ಪ್ರತಿಭಟನೆ: ಕಾರಿಗೆ ಚಪ್ಪಲಿ ತೂರಿದ ಮಹಿಳೆ !

ಬಾಗಲಕೋಟೆಯ ಕಲಾದಗಿಯಲ್ಲಿರುವ ರಂಭಾಪುರಿ ಶಾಖಾ ಮಠದ ದುರಸ್ತಿಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ರಂಭಾಪುರಿ ಜಗದ್ಗುರುಗಳ ಕಾರನ್ನು ಅಡ್ಡಗಡ್ಡಿ ಪ್ರತಿಭಟನೆ ನಡೆಸಲಾಗಿದೆ. 

First Published Feb 17, 2024, 3:07 PM IST | Last Updated Feb 17, 2024, 3:07 PM IST

ಬಾಗಲಕೋಟೆ: ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದಕ್ಕೆ ಸಂಬಂಧಿಸಿದಂತೆ ರಂಭಾಪುರಿ ಜಗದ್ಗುರುಗಳ(Rambhapuri Sri) ವಿರುದ್ಧ ಕಲಾದಗಿಯಲ್ಲಿ ಮಠದ ಭಕ್ತರು ಪ್ರತಿಭಟನೆ(Protest) ನಡೆಸಿದ್ದಾರೆ. ವಿವಾದ ಕೋರ್ಟ್‌ನಲ್ಲಿದ್ದಾಗಲೇ ಗಂಗಾಧರ ಸ್ವಾಮೀಜಿ ಅವರಿಂದ ಮಠದ ದುರಸ್ತಿ, ಹೊಲದ ಉಳುಮೆ ಮಾಡಿದ್ದಕ್ಕೆ  ಆಕ್ರೋಶ ವ್ಯಕ್ತಪಡಿಸಲಾಗಿದೆ. ಅಲ್ಲದೇ ಮಹಿಳೆಯೊಬ್ಬರು ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ತೂರಿದ್ದಾರೆ. ಅಲ್ಲದೇ ಶ್ರೀಗಳು ತೆರಳುವ ವಾಹನ ಅಡ್ಡಗಟ್ಟಲು ಪ್ರಯತ್ನಿಸಲಾಗಿದೆ. ಬಾಗಲಕೋಟೆ(Bagalkote) ತಾಲೂಕಿನ ಕಲಾದಗಿಯಲ್ಲಿ ಈ ಘಟನೆ ನಡೆದಿದ್ದು, ತಳ್ಳಾಟ, ನೂಕಾಟ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ಶ್ರೀಗಳು ತೆರಳುತ್ತಿದ್ದರು. ಶ್ರೀಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ವಿವಾದ ಕೋರ್ಟ್ ನಲ್ಲಿರುವಾಗ ಕಟ್ಟಡ ದುರಸ್ತಿ ಹಾಗೂ ಜಮೀನು ಉಳುಮೆಗೆ ತಕರಾರು ತೆಗೆಯಲಾಗಿದೆ.

ಇದನ್ನೂ ವೀಕ್ಷಿಸಿ:  ಕಲಬುರಗಿ ನಾಗರಿಕರೇ ಎಚ್ಚರ..ಎಚ್ಚರ ! ಹಣ ಎಗರಿಸುವ ಕಳ್ಳರ ಗ್ಯಾಂಗ್‌ ಬಂದಿದೆ ಹುಷಾರ್ !

Video Top Stories