ಶಿರಸಿ ಕಾಲೇಜಿನಲ್ಲಿ ಸಿಕ್ಕ ಮೊಬೈಲ್ ಪುಡಿಪುಡಿ.. ಪ್ರಿನ್ಸಿಪಾಲ್ ಕಾರ್ಯ ಫುಲ್ ವೈರಲ್!

ಮೊಬೈಲ್ ಬಳಕೆಯಿಂದ ಕಲಿಕೆಗೆ ಹಿನ್ನಡೆಯಾಗುತ್ತದೆ ಎಂದು ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಆದರೆ ಹೀಗೆ ನಿಷೇಧ ಮಾಡಿದ್ದರೂ ಕದ್ದುಮುಚ್ಚಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದು ನಿಂತಿಲ್ಲ. ಇಂಥ ವಿದ್ಯಾರ್ಥಿಗಳಿಗೆ ಶಿರಸಿಯ ಕಾಲೇಜಿನ ಪ್ರಾಂಶುಪಾಲರೊಬ್ಬರು ತಕ್ಕ ಪಾಠ ಕಲಿಸಲು ಮುಂದಾಗಿ ಕಾಲೇಜಿನಲ್ಲಿ ಜಪ್ತಾಗಿದ್ದ ಮೊಬೈಲ್ ಗಳನ್ನು ವಿದ್ಯಾರ್ಥಿಗಳ ಎದುರಿನಲ್ಲಿಯೇ ಪುಡಿ ಪುಡಿ ಮಾಡಿ ಹಾಕಿದ್ದಾರೆ.  ಶಿರಸಿಯ ಎಂಇಎಸ್ ಚೈತನ್ಯ ಪದವಿಪೂರ್ವ ಕಾಲೇಜಿನಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಆದರೂ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿದ್ದರು. ಈ ವಿಷಯ ಪ್ರಿನ್ಸಿಪಾಲ್ ಆರ್. ಎಂ. ಭಟ್ ಅವರ ಗಮನಕ್ಕೂ ಬಂದಿತ್ತು. ತಪಾಸಣೆ ನಡೆಸಿ ಮೊಬೈಲ್ ವಶಕ್ಕೆ ಪಡೆದು ಪುಡಿ ಪುಡಿ ಮಾಡಿರುವ ವಿಡಿಯೋ ವೈರಲ್ ಆಗಿದ್ದು ಪರ ಮತ್ತು ವಿರೋಧದ ಅಭಿಪ್ರಾಯ ಬರುತ್ತಿದೆ.

Share this Video
  • FB
  • Linkdin
  • Whatsapp

Related Video