ಬೆಳಗಾವಿಯಲ್ಲಿ ಅಭಿವೃದ್ಧಿ ಪರ್ವ: ಸಾವಿರಾರು ಕೋಟಿ ರೂ. ಕಾಮಗಾರಿಗೆ 'ಮೋದಿ' ಚಾಲನೆ

ಕುಂದಾನಗರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಯ ಪರ್ವ ನಡೆದಿದ್ದು, ಒಂದೇ ವೇದಿಕೆಯಲ್ಲೇ ಸಾವಿರಾರು ಕೋಟಿ ರೂಪಾಯಿ ಕಾಮಗಾರಿಗೆ ಚಾಲನೆ ಸಿಗಲಿದೆ.

First Published Feb 27, 2023, 12:52 PM IST | Last Updated Feb 27, 2023, 12:52 PM IST

ಪ್ರಧಾನಿ ನರೇಂದ್ರ ಮೋದಿ 190 ಕೋಟಿ ವೆಚ್ಚದ ಬೆಳಗಾವಿ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಜಲಜೀವನ್‌ ಮಿಷನ್‌ ಅಡಿ 1,130 ಕೋಟಿಯ ಕಾಮಗಾರಿ, ಕಿಸಾನ್‌ ಸಮ್ಮಾನ್‌ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. ಮೊದಲ ಬಾರಿ ಕರ್ನಾಟಕದಿಂದ ರೈತ ಕಿಸಾನ್‌ ಸಮ್ಮಾನ್‌ ಹಣ ರಿಲೀಸ್‌ ಮಾಡಲಾಗಿದ್ದು, 13ನೇ ಕಂತಿನ 8 ಕೊಟಿ ರೈತರ ಖಾತೆಗೆ ತಲಾ 2000 ರೂ. ಜಮಾ ಆಗಿದ್ದು, 8 ಕೋಟಿ ರೈತರ ಖಾತೆಗಳಿಗೆ ಒಟ್ಟು 16,000 ಕೋಟಿ ರೂ. ಜಮಾ ಆಗಿದ್ದು, ರಾಜ್ಯದ 49.55 ಲಕ್ಷ ರೈತರಿಗೆ 991 ಕೋಟಿ ರೂಪಾಯಿ, ಬೆಳಗಾವಿ ಜಿಲ್ಲೆಯ 5.10 ಲಕ್ಷ ರೈತರ ಖಾತೆಗೆ 102 ಕೋಟಿ ಜಮಾ ಆಗಿದೆ. ಬೆಳಗಾವಿ ಉತ್ತರ ದಕ್ಷಿಣ ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಲಿದ್ದು, ಪೂರ್ಣ ಕುಂಭ ಹೊತ್ತು 10 ಸಾವಿರ ಮಹಿಳೆಯರಿಂದ ಸ್ವಾಗತ ಮೋದಿಗೆ ಸ್ವಾಗತಕ್ಕೆ ಸಿದ್ದತೆ ನಡೆದಿದೆ .

ಮಲೆನಾಡಿಗೆ ಬಿಎಸ್‌ವೈ ಒಂದು ಕಾಣಿಕೆ: ಸಿಎಂ ಬೊಮ್ಮಾಯಿ ಬಣ್ಣನೆ

Video Top Stories