ಆಂಜನೇಯನ ಮೂರ್ತಿ ಮೇಲೆ ಕಾಲಿಟ್ಟು ಪೂಜೆ: ಅರ್ಚಕನ ವಿರುದ್ಧ ಭಕ್ತರ ಆಕ್ರೋಶ
ದೇವರ ತಲೆ ಮೇಲೆ ಕಾಲಿಟ್ಟು ಅರ್ಚಕರೊಬ್ಬರು ಪೂಜೆ ಮಾಡುವ ಮೂಲಕ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಶಿಕಾರಿಪುರ ತಾಲೂಕಿನ ಬಳ್ಳೂರಿನಲ್ಲಿ ಈ ಘಟನೆ ನಡೆದಿದೆ. ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಮಹೇಶ್ವರಯ್ಯ ಎಂಬ ಅರ್ಚಕ, ಆಂಜನೇಯಸ್ವಾಮಿ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಅರ್ಚಕನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಇದು ನಮ್ಮ ಸಂಪ್ರದಾಯ ಎಂದು ಅರ್ಚಕರು ತಿಳಿಸಿದ್ದಾರೆ.