Asianet Suvarna News Asianet Suvarna News

ಹಂಪಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್‌, ಜೋಡಿ ಮಾಡಿದ ಅವಾಂತರ ನೋಡಿ

ಪ್ರೀ ವೆಡ್ಡಿಂಗ್ ಫೋಟೋಶೂಟ್‌ ಹೆಸರಿನಲ್ಲಿ ನಿಯಮ ಮರೆತ ಜೋಡಿ| ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ| ಪುರಾತತ್ವ ಇಲಾಖೆಯ ವಿರುದ್ಧ ಸ್ಥಳೀಯರ ಆಕ್ರೋಶ| ಪ್ರೀ ವೆಡ್ಡಿಂಗ್ ಶೂಟ್‌ಗೆ ಅನುಮತಿ ಪಡೆಯಲಾಗಿದೆ. ಆದ್ರೇ ನಿಯಮಗಳನ್ನು ಪಾಲಿಸಿಲ್ಲ| 

ಬಳ್ಳಾರಿ(ನ.22): ಪ್ರೀ ವೆಡ್ಡಿಂಗ್ ಫೋಟೋಶೂಟ್‌ ಹೆಸರಲ್ಲಿ ಆಂಧ್ರ ಮೂಲದ ದಂಪತಿ ಹಂಪಿ ಸ್ಮಾರಕಗಳ ಮೇಲೆ ಹತ್ತಿಳಿದ್ದಾರೆ. ಈ ಮೂಲಕ ಪುರಾತತ್ವ ಇಲಾಖೆಯ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರೀ ವೆಡ್ಡಿಂಗ್ ಶೂಟ್‌ಗೆ ಅನುಮತಿ ಪಡೆಯಲಾಗಿದೆ. ಆದ್ರೇ ನಿಯಮಗಳನ್ನು ಪಾಲಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ.

ಅಣ್ಣ, ಅಕ್ಕನಿಂದ ವಂಚನೆ: ಮಕ್ಕಳೆದುರೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ!

ವಿಜಯ ವಿಠ್ಠಲ ದೇವಸ್ಥಾನ, ಸಪ್ತಸ್ವರ ಮಂಟಪದಲ್ಲಿ (ಕಲ್ಲಿನಲ್ಲಿ ಸರಿಗಮಪ ಬರೋ‌ ಮಂಟಪ) ಈ ಘಟನೆ ನಡೆದಿದೆ. ಇಲ್ಲಿ ಯಾರಿಗೂ ಹತ್ತಲೂ ಅವಕಾಶವಿಲ್ಲ ಆದ್ರೆ  ಈ ಜೋಡಿ ಮಾತ್ರ ಬಿಂದಾಸ್ ಓಡಾಡುವ ಮೂಲಕ ಸ್ಥಳೀಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಂಪಿಯ ಕೆಲ ಪ್ರದೇಶದಲ್ಲಿ ಡ್ರೋಣ್ ಕ್ಯಾಮರಾ ನಿಷೇಧವಿದೆ ಆದರೆ ಕಮಲ್ ಮಹಲ್‌ಅನ್ನು ಡ್ರೋನ್‌ನಲ್ಲಿ ಶೂಟ್ ಮಾಡಿದ್ದಾರೆ. 
 

Video Top Stories