ಬಿಗ್‌ 3 ಇಂಪ್ಯಾಕ್ಟ್‌: ಯಾದಗಿರಿಯ ಕುಷ್ಟ ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಸಚಿವ ಚವ್ಹಾಣ್‌

ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಪರದಾಡುತ್ತಿದ್ದ ಕುಷ್ಟ ರೋಗಿಗಳು| ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌ 3 ಕಾರ್ಯಕ್ರಮದಲ್ಲಿ ವರದಿ ಪ್ರಸಾರ| ಬಿಗ್‌ 3 ವರದಿಗೆ ಸ್ಪಂದಿಸಿದ ಸಚಿವ ಚವ್ಹಾಣ್‌| ಕಾಲೋನಿಯಲ್ಲಿರುವ ಕುಟುಂಬಗಳಿಗೆ ಅಕ್ಕಿ, ಬೇಳೆ, ಎಣ್ಣೆ ಪದಾರ್ಥಗಳ ವ್ಯವಸ್ಥೆ| 

First Published Feb 17, 2021, 2:00 PM IST | Last Updated Feb 17, 2021, 2:00 PM IST

ಯಾದಗಿರಿ(ಫೆ.17): ನಗರದ ಕುಷ್ಟ ರೋಗಿಗಳ ಕಾಲೋನಿಯಲ್ಲಿ ವಾಸಿಸುವರಿಗೆ ಯಾವುದೇ ಮೂಲ ಸೌಲಭ್ಯಗಳಿಲ್ಲ. ಒಡೆದ ಮನೆ. ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಪರದಾಡುತ್ತಿರುವ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌ 3 ಕಾರ್ಯಕ್ರಮದಲ್ಲಿ ನಿನ್ನೆ(ಮಂಗಳವಾರ) ವರದಿ ಪ್ರಸಾರವಾಗಿತ್ತು. 

ಈ ಜನರತ್ತ ತಿರುಗಿಯೂ ನೋಡುತ್ತಿಲ್ಲ ಅಧಿಕಾರಿಗಳು : ಗೋಳು ಕೇಳೊರ್ಯಾರು..?

ವರದಿ ಪ್ರಸಾರವಾದ ಕೇವಲ ಒಂದೇ ದಿನದಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಸ್ಪಂದಿಸಿದ್ದಾರೆ.  ಕಾಲೋನಿಯಲ್ಲಿರುವ ಕುಟುಂಬಗಳಿಗೆ ಅಕ್ಕಿ, ಬೇಳೆ, ಎಣ್ಣೆ ಪದಾರ್ಥಗಳ ವ್ಯವಸ್ಥೆ ಮಾಡಿಸಿದ್ದಾರೆ.