ಪ್ರಭಾವಿಗಳಿಗೂ ತಟ್ಟುತ್ತಾ ಪೊಲೀಸರ ‌ತನಿಖೆ ಬಿಸಿ..? ದರ್ಶನ್ ಜೊತೆ ಮಾತಾಡಿದ್ದು ಏನು ಮತ್ತು ಯಾಕೆ?

ದರ್ಶನ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ
ದರ್ಶನ್ ಸಂಪರ್ಕದಲ್ಲಿದ್ದವರಿಗೂ ಶುರುವಾಗಿದೆ ಢವಢವ
ಹತ್ಯೆ ಬಳಿಕ ಹಲವರನ್ನ ಸಂಪರ್ಕ ಮಾಡಿದ್ದ ನಟ ದರ್ಶನ್

First Published Jun 21, 2024, 11:10 AM IST | Last Updated Jun 21, 2024, 11:10 AM IST

ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ(Renukaswamy murder case) ಮತ್ತೆ ದರ್ಶನ್‌ಗೆ(Darshan) ಪೊಲೀಸ್ ಕಸ್ಟಡಿ ಆಗಿದೆ. 2 ದಿನ 4 ಆರೋಪಿಗಳನ್ನ ಖಾಕಿ ವಶಕ್ಕೆ ನೀಡಿ ಕೋರ್ಟ್ ಆದೇಶ ನೀಡಿದೆ. ಉಳಿದ ಆರೋಪಿ ಪವಿತ್ರಾಗೌಡ(Pavitra Gowda) ಸೇರಿ 10 ಮಂದಿಯನ್ನ ಪರಪ್ಪನ ಆಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ.ಇದರ ಮಧ್ಯೆ ಕೊಲೆ ಕೇಸ್‌ನಲ್ಲಿ ದರ್ಶನ್ ಬಚಾವ್‌ಗೆ ಯತ್ನಿಸಿದ ಪ್ರಭಾವಿಗಳಿಗೆ ನಡುಕ ಶುರುವಾಗಿದೆ. ಕಾಲ್ ಲಿಸ್ಟ್ ಕಲೆಹಾಕಿದ ಖಾಕಿ ನೋಟಿಸ್ ನೀಡಲು ತನಿಖೆಗೆ ಇಳಿದಿದೆ. ಇನ್ನು ಸಂಪುಟ ಸಭೆಯಲ್ಲಿ ದರ್ಶನ್ ಕ್ರೌರ್ಯಕ್ಕೆ ಸಿದ್ದರಾಮಯ್ಯ ಸಿಟ್ಟಾಗಿದ್ದರಂತೆ. ಮಿನಿಸ್ಟರ್ಸ್‌ಗೆ ಯಾರು ಈ ಕೇಸ್‌ನಲ್ಲಿ ಪರ,ವಿರೋಧ ಮಾಡಬೇಡಿ ತಪ್ಪಿತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಅಂತಾ ಖಡಕ್ ಸೂಚನೆ ಕೊಟ್ಟಿದ್ದರಂತೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಆರೋಗ್ಯ ಬಾಧೆ ಕಾಡಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ..