ಐಡೆಂಟಿಫಿಕೇಷನ್ ಪರೇಡ್‌ನಿಂದ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ! ಮೂವರು ಆರೋಪಿಗಳನ್ನ ಜೈಲಿನಲ್ಲಿ ಪತ್ತೆ ಹಚ್ಚಿದ ಸಾಕ್ಷಿಗಳು

ಹತ್ತಾರು ಜನರ ಮಧ್ಯೆ ಆರೋಪಿಗಳನ್ನ ಸಾಕ್ಷಿಗಳು ಕಂಡು ಹಿಡಿದಿದ್ದು, ತುಮಕೂರು ಜೈಲಿನಲ್ಲಿ ಇಬ್ಬರು, ಬೆಂಗಳೂರು ಜೈಲಲ್ಲಿ ಒಬ್ಬನ ಗುರುತು ಪತ್ತೆ ಮಾಡಲಾಗಿದೆ.

Share this Video
  • FB
  • Linkdin
  • Whatsapp

ದರ್ಶನ್ (Darshan)ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆಯಾಗಿ(Renukaswamy murder case) 1 ತಿಂಗಳು ಆಗಿದೆ. ಇದೀಗ ಐಡೆಂಟಿಫಿಕೇಷನ್ ಪರೇಡ್‌ನಿಂದ (Identification Parade) ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಮೂವರು ಆರೋಪಿಗಳನ್ನ ಜೈಲಿನಲ್ಲೂ ಸಾಕ್ಷಿಗಳು ಪತ್ತೆ ಹಚ್ಚಿವೆ. ಹತ್ತಾರು ಜನರ ಮಧ್ಯೆ ಆರೋಪಿಗಳನ್ನ ಕಂಡು ಹಿಡಿದ ಸಾಕ್ಷಿಗಳು. ತುಮಕೂರು(Tumakuru)ಜೈಲಿನಲ್ಲಿ ಇಬ್ಬರು, ಬೆಂಗಳೂರು ಜೈಲಲ್ಲಿ(Bengaluru Jail) ಒಬ್ಬನ ಗುರುತು ಪತ್ತೆ ಮಾಡಲಾಗಿದೆ. ಸಾಕ್ಷಿಗಳಿಂದ ಆರೋಪಿಗಳ ಐಡೆಂಟಿಫಿಕೇಶನ್ ಪರೇಡ್‌ನನ್ನು ಪೊಲೀಸರು ನಡೆಸಿದ್ದಾರೆ. ಕೃತ್ಯದ ದಿನ ಆರೋಪಿಗಳನ್ನ ನೋಡಿದ ಸಾಕ್ಷಿಗಳಿಂದ ಐಡೆಂಟಿಫಿಕೇಶನ್, ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಪರೇಡ್. ಕಾರ್ತಿಕ್ , ನಿಖಿಲ್ ನಾಯಕ್ , ರಘುಗೆ ಐಡೆಂಟಿಫಿಕೇಶನ್ ಪೆರೇಡ್ ಮಾಡಲಾಗಿದೆ. ತುಮಕೂರು ಜೈಲಲ್ಲಿ ಕಾರ್ತಿಕ್ ಹಾಗೂ ನಿಖಿಲ್‌ಗೆ ಐಡೆಂಟಿಫಿಕೇಶನ್ ಪೆರೇಡ್ ಮಾಡಲಾಗಿದೆ. ಪರಪ್ಪನ ಆಗ್ರಹಾರ ಜೈಲಲ್ಲಿ ರಘುಗೆ ಐಡೆಂಟಿಫಿಕೇಶನ್ ಪರೇಡ್ ಮಾಡಲಾಗಿದ್ದು, ಐ ವಿಟ್ನೆಸ್ ಐಡೆಂಟಿಫಿಕೇಶನ್ ಪರೇಡ್ ಪರಿಗಣನೆ ಆಗಲಿದೆ.

ಇದನ್ನೂ ವೀಕ್ಷಿಸಿ: ಪ್ರೀತಿ ನಿರಾಕರಿಸಿದ್ದಕ್ಕೆ ಮಗುವನ್ನೇ ಕೊಂದ ಅಪ್ರಾಪ್ತೆ..! ಪ್ರೀತಿ ಸಿಗಲಿಲ್ಲ ಎಂದು ಹೀಗೆ ಮಾಡೋದಾ ?

Related Video