Asianet Suvarna News Asianet Suvarna News

ಕೊರೋನಾಗೆ ಔಷಧಿ ಹುಡುಕುವ ವೈದ್ಯರಿಗೆ ಹೊಸ ಅಸ್ತ್ರ, ಬದುಕೋದೆ ಇಲ್ಲ ಎಂಬತ್ತಿದ್ದ ಯುವಕ ಗುಣಮುಖ

ಕೊರೋನಾ ಚಿಕಿತ್ಸೆಗೆ ರಾಮಬಾಣವಾಗಿದೆ ಪ್ಲಾಸ್ಮಾ ಥೆರಪಿ. ಪ್ಲಾಸ್ಮಾ ಥೆರಪಿಯಿಂದ ಕೊರೋನಾ ಸೋಂಕಿತರು ಗುಣಮುಖವಾಗುವ ಸಾಧ್ಯತೆ ಇದೆ.
ಕೊರೋನಾಗೆ ಔಷಧಿ ಹುಡುಕುವ ವೈದ್ಯರಿಗೆ ಹೊಸ ಅಸ್ತ್ರ ಲಭ್ಯವಾಗಿದ್ದು, ಕೊರೋನಾ ಸೋಂಕಿತರನ್ನು ಗುಣಮುಖ ಮಾಡಲು ಪ್ಲಾಸ್ಮಾ ಥೆರಪಿ ಬಳಸಲಾಗುತ್ತಿದೆ.

ದೆಹಲಿ(ಏ.16): ಕೊರೋನಾ ಚಿಕಿತ್ಸೆಗೆ ರಾಮಬಾಣವಾಗಿದೆ ಪ್ಲಾಸ್ಮಾ ಥೆರಪಿ. ಪ್ಲಾಸ್ಮಾ ಥೆರಪಿಯಿಂದ ಕೊರೋನಾ ಸೋಂಕಿತರು ಗುಣಮುಖವಾಗುವ ಸಾಧ್ಯತೆ ಇದೆ.
ಕೊರೋನಾಗೆ ಔಷಧಿ ಹುಡುಕುವ ವೈದ್ಯರಿಗೆ ಹೊಸ ಅಸ್ತ್ರ ಲಭ್ಯವಾಗಿದ್ದು, ಕೊರೋನಾ ಸೋಂಕಿತರನ್ನು ಗುಣಮುಖ ಮಾಡಲು ಪ್ಲಾಸ್ಮಾ ಥೆರಪಿ ಬಳಸಲಾಗುತ್ತಿದೆ.

ಚೀನಾ ಕಳುಹಿಸಿದ PPE ಕಿಟ್ ಭಾರತದ ಸುರಕ್ಷತಾ ಪರೀಕ್ಷೆಯಲ್ಲಿ ಫೇಲ್!

ದೆಹಲಿಯ ಸೋಂಕಿತ ಯುವಕನ ಮೇಲೆ ಪ್ಲಾಸ್ಮಾ ಥೆರಪಿ ಪ್ರಯೋಗಿಸಲಾಗಿದೆ. ವೆಂಟಿಲೇಟರ್ ಇಲ್ಲದೆ ಬದುಕಲಾಗದ ಸ್ಥಿತಿಯಲ್ಲಿದ್ದ ಯುವಕನ ಪಾಲಿಗೆ ಪ್ಲಾಸ್ಮಾ ಥೆರಪಿ ವರವಾಗಿ ಪರಿಣಮಿಸಿದೆ. ಇಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ಆಂಟಿಬಯೋಟಿಕ್‌ನ್ನು ಉಪಯೋಗಿಸಿ ಇತರ ಸೋಂಕಿತರಿಗೆ ಚಿಕಿತ್ಸೆ ನೀಡಬಹುದಾಗಿದೆ.