ಚೀನಾ ಕಳುಹಿಸಿದ PPE ಕಿಟ್ ಭಾರತದ ಸುರಕ್ಷತಾ ಪರೀಕ್ಷೆಯಲ್ಲಿ ಫೇಲ್!

ಚೀನಾ ವಸ್ತುಗಳ ಬಾಳಿಕೆ ವಿಚಾರದಲ್ಲಿ ಬಿಡಿಸಿ ಹೇಳಬೇಕಾಗಿಲ್ಲ. ಬ್ರ್ಯಾಂಡೆಡ್ ವಸ್ತುಗಳನ್ನೇ ನಾಚಿಸುವ ರೀತಿಯಲ್ಲಿರುವ ಚೀನಾ ವಸ್ತುಗಳು ಕಣ್ಮುಚ್ಚಿ ತೆರೆಯುವದರೊಳಗೆ ಆಯಸ್ಸು ಮುಗಿದಿರುತ್ತೆ. ಕೊರೋನಾ ವೈರಸ್ ಹರಡುತ್ತಿರುವ ಈ ಸಂದರ್ಭದಲ್ಲಿ ಚೀನಾ ಕೊಂಚ ಕಾಳಜಿ ತೋರುತ್ತೆ ಅಂತೆ ನಾವು ಭಾವಿಸಿದ್ದರೆ ತಪ್ಪು. ಕಾರಣ  ಚೀನಾ ಕಳುಹಿಸಿದ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳ PPE ಕಿಟ್  ಭಾರತದ ಸುರಕ್ಷತಾ ಪರೀಕ್ಷೆಯಲ್ಲಿ ಫೇಲ್ ಆಗಿದೆ.
 
Imported Chinese ppe kit failed safety test in indian lab
ನವದೆಹಲಿ(ಏ.16): ವಸ್ತುಗಳ ಮೇಲೆ ಮೇಡ್ ಇನ್ ಚೀನಾ ಎಂದಿದ್ದರೆ ಸಾಕು, ಚೀನಾ ದೇಶಕ್ಕೆ ಎಲ್ಲಿಲ್ಲದ ಖುಷಿ. ಯಾವುದೇ ದೇಶಕ್ಕೆ ಹೋದರೂ ಮೇಡ್ ಇನ್ ಚೀನಾ ವಸ್ತುಗಳು ಸುಲಭವಾಗಿ ಕೈಗೆ ಸಿಗುತ್ತದೆ. ಕಾರಣ ಚೀನಾ ಅತ್ಯಂತ ಕಡಿಮೆ ಬೆಲೆ ವಸ್ತುಗಳನ್ನು, ಸರಕುಗಳನ್ನು ಸರಬರಾಜು ಮಾಡುತ್ತದೆ. ಆದರೆ ಈ ವಸ್ತುಗಳ ಬಾಳಿಕೆ ಮಾತ್ರ ಕೇಳಲೇ ಬಾರದು. ವಸ್ತುಗಳು, ಎಲೆಕ್ಟ್ರಾನಿಕ್ ವಿಚಾರದಲ್ಲಿ ಚೀನಾ ವಸ್ತುಗಳಿಗೆ ಬಾಳಿಕೆ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಚೀನಾ ತಯಾರಿಸಿದ ಜೀವರಕ್ಷಕ ವಸ್ತುಗಳೇ ಕಳಪೆಯಾಗಿದೆ ಅನ್ನೋದು ಬಹಿರಂಗವಾಗಿದೆ.
"

'6 ದಿನ'ದ ಸೀಕ್ರೆಟ್: ಚೀನಾ ಮಾಡಿದ ದೊಡ್ಡ ಎಡವಟ್ಟು ಬಹಿರಂಗ!.

ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳಿಗೆ   PPE ಕಿಟ್  ಅವಶ್ಯಕತೆ ಹೆಚ್ಚಿದೆ. ಭಾರತದಲ್ಲಿ ಪ್ರತಿ ದಿನ ಸರಾಸರಿ 1 ಲಕ್ಷ  PPE ಕಿಟ್ ಅವಶ್ಯಕತೆ ಇದೆ. ಇಷ್ಟು ಉತ್ಪಾದನೆ ಭಾರತದಲ್ಲಿ ಇಲ್ಲ. ಸದ್ಯ ಕೆಲ ಕಂಪನಿಗಳು  PPE ಕಿಟ್ ಉತ್ಪಾದನೆ ಆರಂಭಿಸಿದ್ದರೂ ಭಾರತದ ಬೇಡಿಕೆಗೆ ಅನುಗುಣವಾಗಿಲ್ಲ. ಹೀಗಾಗಿ ಭಾರತ ಚೀನಾದಿಂದ  PPE ಕಿಟ್ ಆಮದು ಮಾಡಿಕೊಂಡಿದೆ. ಎಪ್ರಿಲ್ 5 ರಂದು 1.70 ಲಕ್ಷ  PPE ಕಿಟ್  ಭಾರತ ತಲುಪಿದೆ. ಆದರೆ ಈ ಕಿಟ್ ತೀವ್ರ ಕಳಪೆಯಾಗಿದೆ ಎಂದು ಭಾರತ ನಡೆಸಿದ ಸುರಕ್ಷತಾ ಪರೀಕ್ಷೆಯಲ್ಲಿ ಬಯಲಾಗಿದೆ.

ಚೀನಾ ಕಳುಹಿಸಿದ ಕಿಟ್‌ಗಳ ಪೈಕಿ 50,000 ಕಿಟ್‌ಗಳು ಗುಣಮಟ್ಟದ ಪರೀಕ್ಷೆಯಲ್ಲಿ ಫೇಲ್ ಆಗಿದೆ. ಇನ್ನು ಇತರ 40,000 ಕಿಟ್‌ಗಳಿಂದ ಯಾವುದೇ ಸುರಕ್ಷತೆ ಇಲ್ಲ ಅನ್ನೋ ಪರೀಕ್ಷೆಯಲ್ಲಿ ಬಯಲಾಗಿದೆ. ಈ ಕಿಟ್‌ಗಳನ್ನು ಹಾಕಿಕೊಂಡರೆ ವೈದ್ಯರಿಗೆ ಅಥವಾ ಆಸ್ಪತ್ರೆ ಸಿಬ್ಬಂದಿಗಳಿಗೂ ಕೊರೋನಾ ಹರಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಭಾರತದ ಪರೀಕ್ಷೆಯಲ್ಲಿ ಬಹಿರಂಗವಾಗಿದೆ.

WHOಗೆ ಆರ್ಥಿಕ ನೆರವು ಕಟ್ ಮಾಡಿದ ಅಮೆರಿಕ, ಟ್ರಂಪ್ ನಿರ್ಧಾರಕ್ಕೆ ವಿಶ್ವವೇ ಹಿಡಿಶಾಪ!...

ಗ್ವಾಲಿಯರ್‌ನಲ್ಲಿರುವ ಡಿಫೆನ್ಸ್ ರಿಸರ್ಚ್ ಮತ್ತು ಡೆವಲಪ್‌ಮೆಂಟ್ ಆರ್ಗನೈಸೇಶನ್‌ನಲ್ಲಿ ಭಾರತದ ಅಧಿಕಾರಿಗಳು ಕಿಟ್ ಪರೀಕ್ಷೆ ಮಾಡಿದ್ದಾರೆ. ಈ ಕಿಟ್‌ಗಳು ಉಪಯೋಗಕ್ಕೆ ಯೋಗ್ಯವಲ್ಲ. ಭಾರತಕ್ಕೆ ಹೆಚ್ಚಿನ ಕಿಟ್ ಅವಶ್ಯಕತೆ ಇದೆ. ಸದ್ಯ ಭಾರತದಲ್ಲಿ ಪ್ರತಿ ದಿನ 30,000 PPE ಕಿಟ್ ಉತ್ಪಾದನೆಯಾಗುತ್ತಿದೆ. ಆದರೆ ನಮ್ಮ ಅವಶ್ಯಕತೆ ಪ್ರತಿ ದಿನ 1 ಲಕ್ಷ PPE ಕಿಟ್. ಹಾಗಾಂತ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ. ಸದ್ಯ ಭಾರತದಲ್ಲಿ PPE ಕಿಟ್ ಲಭ್ಯವಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಎದರಾಗಬಾರದು ಎಂದು ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಕಿಟ್ ಪರೀಕ್ಷಿಸಿದ ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.

ಸದ್ಯ ಭಾರತಕ್ಕೆ ಕಿಟ್ ಸಪ್ಲೆೈ ಮಾಡುತ್ತಿರುವ ರಾಷ್ಟ್ರಗಳ ಪೈಕಿ ಚೀನಾ ಮುಂಚೂಣಿಯಲ್ಲಿದೆ. ಆದರೆ ಚೀನಾ ಕಳಪೆ ಗುಣಮಟ್ಟದ ಕಿಟ್‌ಗಳಿಂದ ಇದೀಗ ಪ್ರತಿ ಕಿಟ್ ಪರೀಕ್ಷಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಳಪೆ ಹಾಗೂ ಸುರಕ್ಷತೆ ಇಲ್ಲದ ಕಿಟ್‌ಗಳನ್ನು ಯಾವುದೇ ಕಾರಣಕ್ಕೂ ಭಾರತ ಉಪಯೋಗಿಸುವುದಿಲ್ಲ. ಯಾರ ಜೀವದ ಜೊತೆ ಭಾರತ ಚೆಲ್ಲಾಟವಾಡೋದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Latest Videos
Follow Us:
Download App:
  • android
  • ios