ಕ್ವಾರಂಟೈನ್‌: ಚಿಕನ್‌ ನೀಡದಿದ್ದಕ್ಕೆ ಆಶಾ ಕಾರ್ಯಕರ್ತೆ ಕೈ ಮುರಿದ ವ್ಯಕ್ತಿ

ಕ್ವಾರಂಟೈನ್‌  ಕೇಂದ್ರದಲ್ಲಿ ಚಿಕನ್‌ ಊಟ ನೀಡದಿದ್ದಕ್ಕೆ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ| ಕಲಬುರಗಿ ಜಿಲ್ಲೆ ಅಳಂದ ತಾಲೂಕಿನ ಕಿಣ್ಣಿ ಅಬ್ಬಾಸ್‌ ಕೇಂದ್ರದಲ್ಲಿ ನಡೆದ ಘಟನೆ| ಸೋಮನಾಥ್‌ ಕಾಂಬಳೆ ಹಾಗೂ ಕುಟುಂಬಸ್ಥರಿಂದ ಆಶಾ ಕಾರ್ಯಕರ್ತೆ ಮೇಲೆ ಗೂಂಡಾಗಿರಿ|
 

Suvarna News  | Updated: May 23, 2020, 1:44 PM IST

ಕಲಬುರಗಿ(ಮೇ.23): ಕ್ವಾರಂಟೈನ್‌  ಕೇಂದ್ರದಲ್ಲಿ ಚಿಕನ್‌ ನೀಡದಿದ್ದಕ್ಕೆ ಆಶಾ ಕಾರ್ಯಕರ್ತೆ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಅಳಂದ ತಾಲೂಕಿನ ಕಿಣ್ಣಿ ಅಬ್ಬಾಸ್‌ ಕೇಂದ್ರದಲ್ಲಿ ನಡೆದಿದೆ. ಸೋಮನಾಥ್‌ ಕಾಂಬಳೆ ಹಾಗೂ ಕುಟುಂಬಸ್ಥರು ಆಶಾ ಕಾರ್ಯಕರ್ತೆ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. 

ವಿಧಾನ ಪರಿಷತ್ ಚುನಾವಣೆ 2 ತಿಂಗಳು ಮುಂದೂಡಿಕೆ?

ಆಶಾ ಕಾರ್ಯಕರ್ತೆ ರೇಣುಕಾ ಎಂಬುವರ ಮೇಲೆ ಸೋಮನಾಥ್‌ ಎಂಬ ವ್ಯಕ್ತಿ ಹಲ್ಲೆ ನಡೆಸಿದ್ದಾನೆ. ಕ್ವಾರಂಟೈನ್‌ ಕೇಂದ್ರದಲ್ಲಿ ನಾನ್‌ವೆಜ್‌ ಊಟ ನೀಡದಿದ್ದಕ್ಕೆ ಆಶಾ ಕಾರ್ಯಕರ್ತೆ ರೇಣುಕಾ ಅವರ ಕೈಯನ್ನ ಮುರಿದಿದ್ದಾನೆ. ಹೀಗಾಗಿ ಆರೋಪಿ ಸೋಮನಾಥ್‌ ಹಾಗೂ ಅವರು ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ.
 

Read More...