ಅಪಾಯದ ಹಂತದಲ್ಲಿ ಬಡಗಣಿ ನದಿ ಮೇಲಿನ ತೂಗು ಸೇತುವೆ..ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿರುವ ಜನ

ತುಕ್ಕು ಹಿಡಿದ ಹಾಗೂ ತುಂಡಾದ ಹಲಗೆಗಳ ನಡುವೆಯೇ ಸರ್ಕಸ್ ಮಾಡ್ತಾ ಮಹಿಳೆಯರು, ಮಕ್ಕಳು, ವೃದ್ಧರು ಹೊನ್ನಾವರದ ಬಡಗಣಿ‌ ನದಿಯ ತೂಗು ಸೇತುವೆ ಮೇಲೆ ಸಾಗುತ್ತಿದ್ದಾರೆ. 

First Published Mar 17, 2024, 2:22 PM IST | Last Updated Mar 17, 2024, 2:23 PM IST

ಉತ್ತರಕನ್ನಡ: ಹೊನ್ನಾವರದ ಬಡಗಣಿ‌ ನದಿಯ ಮೇಲೆ ಹಾಕಿರೋ‌ ತೂಗು ಸೇತುವೆ ಅಪಾಯದಲ್ಲಿದೆ. ತುಕ್ಕು ಹಿಡಿದ ಹಾಗೂ ತುಂಡಾದ ಹಲಗೆಗಳ ನಡುವೆಯೇ ಸರ್ಕಸ್ ಮಾಡ್ತಾ ಮಹಿಳೆಯರು, ಮಕ್ಕಳು, ವೃದ್ಧರು ಸಾಗುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ತುಂಡಾಗಿ ಬಡಗಣಿ ನದಿಯ ಒಡಲನ್ನು ಈ ತೂಗು ಸೇತುವೆ ಸೇರುವ ಸಾಧ್ಯತೆ ಇದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಹಾಗೂ ಪಾವಿನ ಕುರ್ವೆ ಗ್ರಾಮಕ್ಕೆ ಸ‌ಂಪರ್ಕದ ಕೊಂಡಿಯಾಗಿದೆ . ಸುಮಾರು 100 ರಿಂದ 150 ಮೀಟರ್ ಉದ್ದವಾಗಿದೆ ಬಡಗಣಿ ನದಿಯ ಮೇಲಿನ ಈ ತೂಗು ಸೇತುವೆ, ಪ್ರಸ್ತುತ ಬಲಿಗಾಗಿ ಕಾಯ್ತಿದೆ. ಸುಮಾರು 21 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದು, ಸುಮಾರು 30 ಮೀಟರ್ ಎತ್ತರವಿರುವ ಪಿಲ್ಲರ್‌ಗಳಲ್ಲಿ ಕೂಡ ಬಿರುಕು ಮೂಡಿದೆ. ಈ ಪರಿಸ್ಥಿತಿಯ ಅರಿವಿದ್ರೂ ಕಣ್ಣಿದ್ದು ಕುರುಡರಂತಾಗಿದ್ದಾರೆ ಜನಪ್ರತಿನಿಧಿಗಳು, ಅಧಿಕಾರಿಗಳು. 2002ರಲ್ಲಿ 14ರಿಂದ 17 ಲಕ್ಷ ರೂ. ವೆಚ್ಚದಲ್ಲಿ ಈ ತೂಗು ಸೇತುವೆ ನಿರ್ಮಾಣ ಮಾಡಲಾಗಿತ್ತು. 

ಇದನ್ನೂ ವೀಕ್ಷಿಸಿ:  ಮೋದಿಗೆ ಜಯಕಾರ..ಬಿಎಸ್‌ವೈಗೆ ಧಿಕ್ಕಾರ..! ಏನಿದು K S ಈಶ್ವರಪ್ಪ ರಣತಂತ್ರ..?