Asianet Suvarna News Asianet Suvarna News

ಚಿಪ್ಪಿಕಲ್ಲಿನಲ್ಲಿ ಕಂಡು ಬಂದ ಮುತ್ತು..!: ಗೋಕರ್ಣ ಸಮೀಪ ತದಡಿಯಲ್ಲಿ ಪತ್ತೆ

ಗೋಕರ್ಣದ ತದಡಿಯಲ್ಲಿ ಚಿಪ್ಪಿಕಲ್ಲನ್ನು ಸ್ವಚ್ಛಗೊಳಿಸುವಾಗ ಅದರ ಒಳಗಡೆ ಮುತ್ತು ಪತ್ತೆಯಾಗಿದೆ.

ಆಹಾರ ತಯಾರಿಕೆ ವೇಳೆ ಗೋಕರ್ಣ ತದಡದಲ್ಲಿ ಚಿಪ್ಪಿಕಲ್ಲಿನಲ್ಲಿ ಮುತ್ತು ಕಂಡುಬಂದಿದೆ. ಮೀನುಗಾರಿಕೆ ಸ್ಥಗಿತವಾಗಿರುವ ಹಿನ್ನೆಲೆ ಮೀನುಗಾರರು ಚಿಪ್ಪಿಕಲ್ಲನ್ನು ಹಿಡಿಯುತ್ತಿದ್ದರು. ಮಹಿಳೆಯೊಬ್ಬರು ಚಿಪ್ಪನ್ನು ಮಾರಾಟ ಮಾಡಿದ್ದಾರೆ. ತದಡಿಯ ಮಾಜಿ ಗ್ರಾಮಪಂಚಾಯಿತಿ ಸದಸ್ಯೆ ಪಾರ್ವತಿ ನಾಯ್ಕ್‌ ಎಂಬುವವರು ಆ ಚಿಪ್ಪನ್ನು ಖರೀದಿಸಿದ್ದರು. ಅವರು ಮನೆಗೆ ತೆಗೆದುಕೊಂಡು ಹೋಗಿ, ಅದನ್ನು ಸ್ವಚ್ಛಗೊಳಿಸುವಾಗ ಒಳಗಡೆ ಮುತ್ತು ಕಂಡುಬಂದಿದೆ. ಇದರಿಂದ ಮನೆಯವರೆಲ್ಲಾ ಆಶ್ಚರ್ಯಗೊಂಡಿದ್ದಾರೆ. ಈ ಘಟನೆ ಬಳಿಕ ಚಿಪ್ಪಿಕಲ್ಲು ಮಾರಾಟ ಮತ್ತು ಸಂಗ್ರಹ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ವೀಕ್ಷಿಸಿ: ಗೃಹಜ್ಯೋತಿ ಯೋಜನೆ ಮಾರ್ಗಸೂಚಿ ಬಿಡುಗಡೆ: ಬಾಡಿಗೆದಾರರಿಗಿಲ್ಲ ಉಚಿತ ವಿದ್ಯುತ್‌ ಭಾಗ್ಯ!